ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇವತ್ತು ಶುಕ್ರವಾರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಎರಡೂ ಕೂಡ ಹೊಸ ಎತ್ತರಕ್ಕೆ ಹೋಗಿದೆ. ಬೆಳ್ಳಿ ಬೆಲೆಯಂತೂ ಒಂದೇ ದಿನಕ್ಕೆ ಗ್ರಾಮ್ ಗೆ 3 ರೂನಷ್ಟು ಜಂಪ್ ಕಂಡಿದೆ. ಇದು ಒಂದು ದಿನದಲ್ಲಿ ಬೆಳ್ಳಿ ಬೆಲೆ ಕಂಡ ಅತಿ ದೊಡ್ಡ ಹೆಚ್ಚಳಗಳಲ್ಲಿ ಒಂದು.
ಚಿನ್ನದ ಬೆಲೆಯೂ ಗ್ರಾಮ್ ಗೆ 100 ರೂಗೂ ಹೆಚ್ಚಿನ ಮೊತ್ತದಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 9,100 ರೂ ಗಡಿ ಸಮೀಪಕ್ಕೆ ಹೋಗಿದೆ. ಆಭರಣ ಚಿನ್ನದ ಬೆಲೆಯೂ 8,340 ರೂಗೆ ಏರಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 105 ರೂಗೆ ಏರಿದೆ. ಇದು ಬೆಂಗಳೂರಿನಲ್ಲಿ ದಾಖಲೆಯ ಬೆಳ್ಳಿ ಬೆಲೆ. ಚೆನ್ನೈ ಮೊದಲಾದ ಕಡೆ ಬೆಳ್ಳಿ ಬೆಲೆ 114 ರೂಗೆ ಹೆಚ್ಚಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 28ಕ್ಕೆ)
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 83,400 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 90,980 ರೂ
18 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 68,240 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 83,400 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 90,980 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ