ಚಿನ್ನದ ಬೆಲೆ ಭರ್ಜರಿ ಇಳಿಕೆ: ಇಲ್ಲಿದೆ ದರಪಟ್ಟಿ

- Advertisement -

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಶುಕ್ರವಾರ ಭರ್ಜರಿಯಾಗಿ ಇಳಿದಿವೆ. ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ ಗಣನೀಯವಾಗಿ ಇಳಿದಿದೆ.

- Advertisement -

ಗ್ರಾಮ್​​ ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ. 8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ.

ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್ ​​ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ ಸಂಜೆಯೂ 2 ರೂ ಇಳಿಕೆಯಾಗಿತ್ತು ಬೆಳ್ಳಿ ಬೆಲೆ. ಒಂದೇ ದಿನದ ಅಂತರದಲ್ಲಿ 6 ರೂಗಳಷ್ಟು ಇಳಿಕೆಯಾಗಿದೆ.

- Advertisement -

ಮಾರ್ಚ್ 31ರ ಬಳಿಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳ್ಳಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ ನ 22 ಕ್ಯಾರಟ್ ಚಿನ್ನದ ಬೆಲೆ 84,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 91,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 4ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 84,000 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 91,640 ರೂ
18 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ ನ 10 ಗ್ರಾಂ ಚಿನ್ನದ ಬೆಲೆ: 84,000 ರೂ
24 ಕ್ಯಾರಟ್​ ನ 10 ಗ್ರಾಂ ಚಿನ್ನದ ಬೆಲೆ: 91,640 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

- Advertisement -


Must Read

Related Articles