ಬೆಂಗಳೂರು: ಚಿನ್ನದ ಬೆಲೆ ಸತತ ಎರಡನೇ ಬಾರಿ ಇಳಿಕೆ ಕಂಡಿದೆ. ನಿನ್ನೆ ಸೋಮವಾರ ಗ್ರಾಮ್ ಗೆ 15 ರೂ ಕಡಿಮೆ ಆಗಿದ್ದ ಆಭರಣ ಚಿನ್ನದ ಬೆಲೆ ಇವತ್ತು 35 ರೂ ತಗ್ಗಿದೆ.
ಇದರೊಂದಿಗೆ ಎರಡು ದಿನದಲ್ಲಿ 50 ರೂ ಇಳಿಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಹಲವೆಡೆ ಚಿನ್ನದ ಬೆಲೆ ಇಳಿದಿದೆ. ಬೆಳ್ಳಿ ಬೆಲೆಯೂ ಅಲ್ಪಸ್ವಲ್ಪ ಇಳಿಯುತ್ತಿದೆ. ಎರಡು ದಿನದಲ್ಲಿ ಗ್ರಾಮ್ ಗೆ 20 ಪೈಸೆಯಷ್ಟು ಬೆಳ್ಳಿ ಬೆಲೆ ಕಡಿಮೆಗೊಂಡಿದೆ. ಗ್ರಾಮ್ ಗೆ 100 ರೂ ಇದ್ದ ಬೆಳ್ಳಿ ಬೆಲೆ 99.80 ರೂ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,980 ರುಪಾಯಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 15ಕ್ಕೆ)
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 87,200 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 95,180 ರೂ
18 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 71,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 998 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 87,200 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 95,180 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 998 ರೂ