Home ಟಾಪ್ ಸುದ್ದಿಗಳು ಒಂದು ದಿನದ ಮಟ್ಟಿಗೆ ಸಿಬಿಐ, ಇಡಿ ಕಂಟ್ರೋಲ್ ನನಗೆ ಕೊಡಿ; ಬಿಜೆಪಿಯ ಅರ್ಧ ಮಂದಿ ಜೈಲಲ್ಲಿರುತ್ತಾರೆ:...

ಒಂದು ದಿನದ ಮಟ್ಟಿಗೆ ಸಿಬಿಐ, ಇಡಿ ಕಂಟ್ರೋಲ್ ನನಗೆ ಕೊಡಿ; ಬಿಜೆಪಿಯ ಅರ್ಧ ಮಂದಿ ಜೈಲಲ್ಲಿರುತ್ತಾರೆ: ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ 167 ಮೊಕದ್ದಮೆ ಹೂಡಲಾಗಿದೆ. ಆದರೆ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಅವುಗಳಲ್ಲಿ ಯಾವುದನ್ನೂ ಸಾಕ್ಷ್ಯಿ ಸಮೇತ ನಿರೂಪಿಸಲು ಸಾಧ್ಯವಾಗಿಲ್ಲ. ಒಂದು ದಿನದ ಮಟ್ಟಿಗೆ ಸಿಬಿಐ ಮತ್ತು ಇಡಿ- ಜಾರಿ ನಿರ್ದೇಶನಾಲಯದ ಹತೋಟಿಯನ್ನು ನನಗೆ ಕೊಡಿ. ಅರ್ಧದಷ್ಟು ಬಿಜೆಪಿಯವರು ಜೈಲಲ್ಲಿ ಇರುತ್ತಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿಯ ಮೇಲೆ ಹರಿಹಾಯ್ದಿದ್ದಾರೆ.

“ಏನೂ ತಪ್ಪಿಲ್ಲದೆ ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ಕಳೆದ 7 ವರ್ಷಗಳಿಂದ ಅವರು 167 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕೋರ್ಟಿನಲ್ಲಿ ಒಂದೇ ಒಂದು ಮೊಕದ್ದಮೆ ಸಾಬೀತಾಗಿಲ್ಲ. ಉಳಿದವು ನಡೆಯುತ್ತಿವೆ. 800 ಕೇಂದ್ರೀಯ ತನಿಖಾ ದಳದ ಅಧಿಕಾರಿಗಳನ್ನು ಎಎಪಿ ಪಕ್ಷದ ತಪ್ಪುಗಳನ್ನು ಹಿಡಿಯಿರಿ ಎಂದೇ ಛೂ ಬಿಡಲಾಗಿದೆ. ಆದರೆ ಅವರಿಂದ ಏನೂ ಆಗಿಲ್ಲ. ಸುಳ್ಳು ಕೇಸುಗಳನ್ನು ಮಾತನಾಡುತ್ತ ಹೇಳಿದರು.

ಮತ್ತೆ ಪ್ರಧಾನಿ ಮೋದಿಯವರು ಸ್ವಚ್ಛ ಸರಕಾರ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಯನ್ನು ಕೇಜ್ರಿವಾಲರಿಗೆ ಕೇಳಿದ್ದಕ್ಕೆ “ ಒಂದು ದಿನದ ಮಟ್ಟಿಗೆ ನನ್ನ ಹತೋಟಿಗೆ ಸಿಬಿಐ ಮತ್ತು ಇಡಿ- ಜಾರಿ ನಿರ್ದೇಶನಾಲಯ ಕೊಡಿ. ಬಿಜೆಪಿಯ ಅರ್ಧಕ್ಕೂ ಹೆಚ್ಚು ಜನ ಜೈಲು ಸೇರುತ್ತಾರೆ” ಎಂದು ಅರವಿಂದ ಕೇಜ್ರಿವಾಲ್ ಉತ್ತರಿಸಿದರು.

Join Whatsapp
Exit mobile version