Home ಟಾಪ್ ಸುದ್ದಿಗಳು ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಇನ್ನೂ ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಡಿ: ಬಿಎಸ್​...

ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಇನ್ನೂ ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಡಿ: ಬಿಎಸ್​ ವೈ ವಿರುದ್ಧ ಯತ್ನಾಳ್​ ಕಿಡಿ

ಬೆಂಗಳೂರು: ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತಾ ಈಗ ನಿಕಟಪೂರ್ವ ಎಂದು ಹೇಳುತ್ತಾರೆ. ಅಪ್ಪ, ಮಗ ನಾಟಕ ಮಾಡಬೇಡಿ ಅಂತಾ ಈ ಹಿಂದೆ ನಾನು ಹೇಳಿದ್ದೆ. ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಯಾಕಂದ್ರೆ ಆ ಖುರ್ಚಿ ಬಿಡಬಾರದು‌ ಅಂತ. ರೈತರ ಬಗ್ಗೆ ಕಣ್ಣೀರು ಹಾಕೋದು ನೋಡಿದರೇ ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು

Join Whatsapp
Exit mobile version