Home ಟಾಪ್ ಸುದ್ದಿಗಳು ಅರಿಶಿಣ ನಡುವೆ ಗಾಂಜಾ ಗಿಡ ಬೆಳೆಸಿದ್ದ ಅಪ್ಪ-ಮಗನ ಬಂಧನ

ಅರಿಶಿಣ ನಡುವೆ ಗಾಂಜಾ ಗಿಡ ಬೆಳೆಸಿದ್ದ ಅಪ್ಪ-ಮಗನ ಬಂಧನ

ಚಾಮರಾಜನಗರ: ಜಮೀನೊಂದರಲ್ಲಿ ಅರಿಶಿಣ ಬೆಳೆಯ ಮಧ್ಯೆ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಹನೂರು ಪೊಲೀಸರು ವಶಕ್ಕೆ ಪಡೆದ ಘಟನೆ ಹನೂರು ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ತಾಲೂಕಿನ ಆನೆಗುಂದಿ ಗ್ರಾಮದ ಎಸ್ ಬಾಲು (65) ಹಾಗೂ ಇವರ ಮಗ ಮಹಾಲಿಂಗ (35) ರನ್ನು ಪೊಲೀಸರು ಬಂಧಿಸಿದ್ದಾರೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಆನೆಗುಂದಿ ಗ್ರಾಮದ ಜಮೀನೊಂದರಲ್ಲಿ ಅಕ್ರಮ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಅರಿಶಿಣ ಬೆಳೆಯ ಮಧ್ಯೆ ಬೆಳೆಯಲಾಗಿದ್ದ ಸುಮಾರು 2 ಲಕ್ಷ ಮೌಲ್ಯದ 95 ಗಾಂಜಾ (34 ಕೆಜಿ) ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version