Home ಟಾಪ್ ಸುದ್ದಿಗಳು ನೀರೆಂದು ಭಾವಿಸಿ ಸೀಮೆಎಣ್ಣೆ ಕುಡಿದ ಬಾಲಕಿ ಮೃತ್ಯು

ನೀರೆಂದು ಭಾವಿಸಿ ಸೀಮೆಎಣ್ಣೆ ಕುಡಿದ ಬಾಲಕಿ ಮೃತ್ಯು

ತಮಿಳುನಾಡು: ಬಾಯಾರಿದ ಬಾಲಕಿಯೊಬ್ಬಳು ನೀರೆಂದು ಭಾವಿಸಿ ಸೀಮೆಎಣ್ಣೆ ಸೇವಿಸಿ ಮೃತಪಟ್ಟ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಪಲ್ಲವರ್ ಮೇಡು ಗ್ರಾಮದಲ್ಲಿ ನಡೆದಿದೆ.


ರಾಜೇಂದ್ರನ್ ಎಂಬುವವರ 6 ವರ್ಷದ ಮಗಳು ಕಾರ್ತಿಕ ಮನೆಯಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಾಯಾರಿದ ಆಕೆ ಕುಡಿದದ್ದು ನೀರಿನ ಬಾಟಲಿಯಲ್ಲಿ ತುಂಬಿಸಿಟ್ಟಿದ್ದ ಸೀಮೆಎಣ್ಣೆಯನ್ನಾಗಿದೆ. ಸೀಮೆ ಎಣ್ಣೆ ಹೊಟ್ಟೆ ಸೇರಿ ಕೆಲ ಹೊತ್ತು ಕಳೆಯುತ್ತಿದ್ದಂತೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಬಳಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಹೆತ್ತವರ ರೋದನ ಮುಗಿಳು ಮಟ್ಟಿದೆ. ನೀರಿನ ಬಾಟಲಿಯಲ್ಲಿ ಸೀಮೆ ಎಣ್ಣೆ ತುಂಬಿಸಿ ಮಕ್ಕಳ ಕೈಗೆ ಸಿಗುವಲ್ಲಿ ಇಟ್ಟ ಹೆತ್ತವರ ಬೇಜವಾಬ್ದಾರಿಗೆ ಜನರು ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

Join Whatsapp
Exit mobile version