Home ಟಾಪ್ ಸುದ್ದಿಗಳು ವಿಪಕ್ಷ ಕೂಟಕ್ಕೆ ಹೊಸ ಹೆಸರು ಕೊಟ್ಟ ಪ್ರಧಾನಿ ಮೋದಿ

ವಿಪಕ್ಷ ಕೂಟಕ್ಕೆ ಹೊಸ ಹೆಸರು ಕೊಟ್ಟ ಪ್ರಧಾನಿ ಮೋದಿ

ಹೊಸದಿಲ್ಲಿ: ವಿಪಕ್ಷಗಳ ಕೂಟದ ವಿರುದ್ಧ ಪ್ರಧಾನಿ ಮೋದಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಐಎನ್‍ಡಿಐಎ (INDIA) ಕೂಟಕ್ಕೆ ಮೋದಿ ಹೊಸ ಹೆಸರು ಕೊಟ್ಟಿದ್ದಾರೆ.

ಬಿಹಾರದ ಮಿತ್ರ ಪಕ್ಷಗಳೊಂದಿಗೆ ಸಭೆ ನಡೆಸಿದ ಮೋದಿ, ವಿಪಕ್ಷಗಳ ಕೂಟವನ್ನು ಇಂಡಿಯಾ ಎಂದು ಕರೆಯುವ ಬದಲು ಘಮಾಂಡಿಯಾ ಎಂದು ಕರೆಯಬೇಕು ಕರೆ ನೀಡಿದ್ದಾರೆ. ಘಮಾಂಡಿಯಾ ಎಂಬುದು ಹಿಂದಿ ಪದ. ಇದಕ್ಕೆ ಸೊಕ್ಕು, ದುರಹಂಕಾರಿ ಎಂಬ ಅರ್ಥವಿದೆ. ಮೋದಿ ಘಮಾಂಡಿಯಾ ಎಂಬ ಪದ ಬಳಸಿರೋದಕ್ಕೆ ಕಾಂಗ್ರೆಸ್ ಸೇರಿ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಈ ಮಧ್ಯೆ ವಿಪಕ್ಷ ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರೋದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, 26 ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ. ವಿಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿ ಇಂಡಿಯಾ ಹೆಸರನ್ನು ದುರ್ಬಳಕೆ ಮಾಡಿಕೊಳ್ತಿವೆ. ಈ ಮೂಲಕ ಎನ್‍ಡಿಎ ಮತ್ತು ಪ್ರಧಾನಿ ಮೋದಿಯವರು ತಮ್ಮ ದೇಶದ ವಿರುದ್ಧವೇ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಬಿಂಬಿಸಲು ಯತ್ನಿಸಿವೆ ಎಂದು ದೂರಿ ವಕೀಲರೊಬ್ಬರು ಪಿಐಎಲ್ ಹಾಕಿಕೊಂಡಿದ್ದರು.

Join Whatsapp
Exit mobile version