Home ಟಾಪ್ ಸುದ್ದಿಗಳು ಗಾಝಾ: 30 ಸಾವಿರಕ್ಕೂ ಹೆಚ್ಚು ಜನರಿರುವ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ

ಗಾಝಾ: 30 ಸಾವಿರಕ್ಕೂ ಹೆಚ್ಚು ಜನರಿರುವ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ

Smoke rises as a tower building collapses after it was hit by Israeli air strikes amid a flare-up of Israeli-Palestinian violence, in Gaza City May 12, 2021. REUTERS/Ibraheem Abu Mustafa - UP1EH5C1ALIK1

ಗಾಝಾ: :ಗಾಜಾಪಟ್ಟಿಯಲ್ಲಿನ ದೊಡ್ಡ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್‌ ಪಡೆಗಳು ಇಂದು ನಸುಕಿನಲ್ಲಿ ದಾಳಿ ನಡೆಸಿದೆ. ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ಷಣೆ ಕೋರಿ ಆಶ್ರಯ ಬಯಸಿರುವ 30 ಸಾವಿರಕ್ಕೂ ಹೆಚ್ಚು ಜನರು ಈ ಆಸ್ಪತ್ರೆಯೊಳಗಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್‌ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ.

ಮೂರು ತಿಂಗಳಿನಿಂದ ಚಿಕಿತ್ಸೆಯಲ್ಲಿರುವ ನಾನು ಈಗ ಒಳಗೆ ಸಿಲುಕಿಕೊಂಡಿದ್ದೇನೆ. ಯಾರಾದರೂ ಓಡಾಡುವುದು ಕಾಣಿಸಿದರೆ ಗುಂಡು ಹಾರಿಸುತ್ತಾರೆ. ವೈದ್ಯರು, ಆಂಬುಲೆನ್ಸ್‌ಗಳು ಸಹ ಓಡಾಡುವಂತಿಲ್ಲ ಎಂದು ಆಸ್ಪತ್ರೆಯೊಳಗಿರುವ ಅಬ್ಡೆಲ್‌-ಹದಿ ಸಯೀದ್ ಎಂಬವರು ತಿಳಿಸಿದ್ದಾಗಿ ವರದಿಯಾಗಿದೆ.

ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶ್ರಯ ಬಯಸಿರುವ 30 ಸಾವಿರಕ್ಕೂ ಹೆಚ್ಚು ಜನರು ಈ ಆಸ್ಪತ್ರೆಯೊಳಗಿದ್ದಾರೆ. ಇದರ ವಿಶೇಷ ಶಸ್ತ್ರಚಿಕಿತ್ಸೆ ನಡೆಸುವ ಕಟ್ಟಡವನ್ನೇ ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆ ಗುಂಡಿನ ದಾಳಿ ನಡೆಸಿವೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

Join Whatsapp
Exit mobile version