Home ಟಾಪ್ ಸುದ್ದಿಗಳು ನಕಲಿ ದಾಖಲೆ ಸಾಲ ನೀಡಿದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಜೈಲು

ನಕಲಿ ದಾಖಲೆ ಸಾಲ ನೀಡಿದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಜೈಲು

ಬೆಂಗಳೂರು: ನಕಲಿ ದಾಖಲೆ ಸಾಲ ನೀಡಿದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸಿಂಡಿಕೇಟ್ ಬ್ಯಾಂಕ್ ಜಾಲಹಳ್ಳಿ ಶಾಖೆ ಅಂದಿನ ವ್ಯವಸ್ಥಾಪಕ ಜಿ.ಸತ್ಯಬಾಬು, ಅಧಿಕಾರಿಗಳಾದ ಎಸ್. ಭಾರತಿ, ನಳಿನಾಕ್ಷಿ, ಎಸ್. ರಮೇಶ್ ಮತ್ತು ಪ್ರಿನ್ಸ್ ನೇಶನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

2016ರ ಬ್ಯಾಂಕ್‌ನ ಹಿಂದಿನ ಹಿರಿಯ ವ್ಯವಸ್ಥಾಪಕ ಸತ್ಯಬಾಬು, ಇತರ ಅಪರಾಧಿಗಳೊಂದಿಗೆ ಸೇರಿಕೊಂಡು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿದ್ದರು ಎಂಬುದು ಕೋರ್ಟಿನಲ್ಲಿ ಸಾಬೀತಾಗಿದೆ.

ಅಕ್ರಮ ಬೆಳಕಿಗೆ ಬಂದು ಸತ್ಯಬಾಬು ಮತ್ತು ಇತರರ ವಿರುದ್ಧ ಸಿಬಿಐ ಎಫ್ ಐ ಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಮೇರೆಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರತ್ಯೇಕ ಎರಡು ಆರೋಪಪಟ್ಟಿಯನ್ನು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದರು.

Join Whatsapp
Exit mobile version