Home ಟಾಪ್ ಸುದ್ದಿಗಳು ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: 102ರೂ ಹೆಚ್ಚಿಸಿದ ಕೇಂದ್ರ !

ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: 102ರೂ ಹೆಚ್ಚಿಸಿದ ಕೇಂದ್ರ !

ನವದೆಹಲಿ: ತಿಂಗಳಾರಂಭ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಕೇಂದ್ರ ಸರಕಾರವು ಇಂದಿನಿಂದ ವಾಣಿಜ್ಯ ಸಿಲಿಂಡರ್ ದರವನ್ನು 102ರೂ.ಹೆಚ್ಚಿಸಿದೆ. ಇದರಿಂದ 19 ಕೆಜಿ ತೂಕದ ಸಿಲಿಂಡರ್ ಬೆಲೆ ಬರೋಬ್ಬರಿ 2430.50ರೂ.ಗೆ ಏರಿಕೆ ಕಂಡಿದೆ.

ಅದ್ಯಾಗೂ, ಗೃಹೋಪಯೋಗಿ ಸಿಲಿಂಡರ್ ಮೇಲೆ ದರ ಏರಿಯಾಗಿಲ್ಲ , ಕಳೆದ ಒಂದು ತಿಂಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಗೃಹ ಬಳಕೆಯ LPG ಸಿಲಿಂಡರ್ ಬೆಲೆಯನ್ನು ₹ 250 ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಸರಕಾರ ದರ ಏರಿಕೆಗೊಳಿಸಿದೆ.

ಗೃಹ ಬಳಕೆಯ ಸಿಲಿಂಡ್ ಬೆಲೆಯನ್ನು ಸರಕಾರ ಈ ಹಿಂದೆ ಕಳೆದ ತಿಂಗಳ ಮಾರ್ಚ್ 22ರಂದು 50ರೂ. ಹೆಚ್ಚಿಸಿತ್ತು. ಒಟ್ಟು ಗೃಹ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ 952.50 ರೂಪಾಯಿಗೆ ಏರಿಕೆಗೊಂಡಿತ್ತು

Join Whatsapp
Exit mobile version