Home ಟಾಪ್ ಸುದ್ದಿಗಳು ಬೆಳ್ಳುಳ್ಳಿ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ: ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ರೈತ

ಬೆಳ್ಳುಳ್ಳಿ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ: ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ರೈತ

ಚಿಂದ್ವಾಡ : ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಮಹಾರಾಷ್ಟ್ರದಲ್ಲಿ ಕೆಜಿಗೆ 600 ರೂಪಾಯಿಗಳ ಗಡಿ ದಾಟಿದೆ.


ಬೆಳ್ಳುಳ್ಳಿ ಕಳ್ಳತನದ ಕೆಲವು ಘಟನೆಗಳು ಬೆಳಕಿಗೆ ಬಂದ ನಂತರ ಮಧ್ಯಪ್ರದೇಶದ ಚಿಂದ್ವಾಡ ಜಿಲ್ಲೆಯ ಮೊಹ್ಖೇದ್ ಪ್ರದೇಶದ ಐದಾರು ಗ್ರಾಮಗಳ ಹೊಲಗಳಲ್ಲಿ ರೈತರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.


“ಈ ಕ್ಯಾಮೆರಾಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಏನಾದರೂ ಅನುಮಾನಾಸ್ಪದವಾಗಿ ಕಂಡರೆ ಅಲಾರಾಂ ಸದ್ದು ಮಾಡಲಿದೆ. ಜೊತೆಗೆ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕಳ್ಳತನಗಳು ಕಡಿಮೆಯಾಗಿದೆ” ಎಂದು ರಾಹುಲ್ ದೇಶಮುಖ್ ಎಂಬ ರೈತ ಹೇಳಿದ್ದಾರೆ. ಕಳೆದ 60 ವರ್ಷಗಳಲ್ಲಿ ಬೆಳ್ಳುಳ್ಳಿ ಬೆಲೆ ಇಷ್ಟೊಂದು ಏರಿಕೆ ಕಂಡಿಲ್ಲ. ಆದರೆ ಈಗ ಬೆಳ್ಳುಳ್ಳಿ ಕೃಷಿ ಮಾಡಿದ ರೈತರು ಶ್ರೀಮಂತರಾದರೂ ಕೂಡ ತಮ್ಮ ಬೆಳೆ ಕಳ್ಳತನವಾಗುವ ಭೀತಿಯಲ್ಲಿದ್ದಾರೆ.

Join Whatsapp
Exit mobile version