Home ಟಾಪ್ ಸುದ್ದಿಗಳು ಗದಗ: ವಿದ್ಯಾರ್ಥಿಯನ್ನು ಶಾಲಾ ಕಟ್ಟಡದಿಂದ ಹೊರಕ್ಕೆಸೆದು ಹತ್ಯೆ| ಆರೋಪಿ ಶಿಕ್ಷಕನ ಬಂಧನ

ಗದಗ: ವಿದ್ಯಾರ್ಥಿಯನ್ನು ಶಾಲಾ ಕಟ್ಟಡದಿಂದ ಹೊರಕ್ಕೆಸೆದು ಹತ್ಯೆ| ಆರೋಪಿ ಶಿಕ್ಷಕನ ಬಂಧನ

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದರ ಶಿಕ್ಷಕನೋರ್ವ 4ನೇ ತರಗತಿಯ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದು ಹತ್ಯೆಗೈದಿದ್ದು, ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.   

ಭರತ್ ಎಂಬ ನಾಲ್ಕನೇ ತರಗತಿಯ ಬಾಲಕನನ್ನು ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ, ಕಬ್ಬಿಣದ ರಾಡಿನಿಂದ ಗಂಭೀರ ಹಲ್ಲೆ ನಡೆಸಿ ಶಾಲೆಯ ಕಟ್ಟಡದ ಮಹಡಿಯಿಂದ ಹೊರಗೆ ಎಸೆದಿದ್ದಾನೆ.  ಶಿಕ್ಷಕನ ಕ್ರೌರ್ಯವನ್ನು ತಡೆಯಲು ಹೋದ ಅದೇ ಶಾಲೆಯ ಶಿಕ್ಷಕಿಯೂ ಆದ ಮೃತ ಬಾಲಕನ ತಾಯಿಯ ಮೇಲೂ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಶಿಕ್ಷಕಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Join Whatsapp
Exit mobile version