Home ಟಾಪ್ ಸುದ್ದಿಗಳು FSSAI ಆದೇಶ: 4 ಟನ್‌ ಖಾರದ ಪುಡಿಯನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದ ಪತಂಜಲಿ

FSSAI ಆದೇಶ: 4 ಟನ್‌ ಖಾರದ ಪುಡಿಯನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದ ಪತಂಜಲಿ

ನವದೆಹಲಿ: ಭಾರತದ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ದೇಶನದ ಹಿನ್ನೆಲೆಯಲ್ಲಿ ಪತಂಜಲಿ ಫುಡ್ಸ್‌ ಲಿಮಿಟೆಡ್‌ ಮಾರುಕಟ್ಟೆಯಿಂದ 4 ಟನ್‌ ಕೆಂಪು ಮೆಣಸಿನಕಾಯಿ ಪುಡಿಯನ್ನು ವಾಪಸ್‌ ಪಡೆದಿದೆ.

ಪತಂಜಲಿಯ ಕೆಂಪು ಮೆಣಸಿನ ಪುಡಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೀಟನಾಶಕ ಉಳಿಕೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿತ್ತು. ಹೀಗಾಗಿ ಇದನ್ನು ಮಾರುಕಟ್ಟೆಯಿಂದ ನಿಷೇಧಿಸುವ ತೀರ್ಮಾನವನ್ನು ಭಾರತದ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ ಕೈಗೊಂಡಿತ್ತು.

“200 ಗ್ರಾಂ ಪೊಟ್ಟಣಗಳಲ್ಲಿದ್ದ ಸುಮಾರು 4 ಟನ್‌ನಷ್ಟು ಖಾರದ ಪುಡಿಯನ್ನು ಮಾರಾಟ ಮಾಡದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ ನೀಡಿದ್ದ ನಿರ್ದೇಶನವನ್ನು ನಾವು ಪಾಲಿಸಿದ್ದೇವೆ,” ಎಂದು ಪತಂಜಲಿ ಫುಡ್ಸ್‌ ಕಂಪನಿ ಸಿಇಒ ಸಂಜೀವ್‌ ಅಸ್ತಾನಾ ಹೇಳಿದ್ದಾರೆ.

Join Whatsapp
Exit mobile version