Home ಟಾಪ್ ಸುದ್ದಿಗಳು ‘ಚಾನೆಲ್’ ಮುಖ್ಯಸ್ಥರಾಗಿ ಭಾರತದ ಲೀನಾ ನಾಯರ್ ನೇಮಕ

‘ಚಾನೆಲ್’ ಮುಖ್ಯಸ್ಥರಾಗಿ ಭಾರತದ ಲೀನಾ ನಾಯರ್ ನೇಮಕ

ಪ್ಯಾರಿಸ್: ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ‘ಚಾನೆಲ್’ನ ಮುಖ್ಯಸ್ಥರಾಗಿ ಭಾರತೀಯ ಮೂಲದ ಲೀನಾ ನಾಯರ್ ನೇಮಕವಾಗಿದ್ದಾರೆ. ಸದ್ಯ ಯುನಿಲಿವರ್‌’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯಾಗಿರುವ ಲೀನಾ ನಾಯರ್ ಅವಧಿ ಜನವರಿಯಲ್ಲಿ ಮುಕ್ತಾಯವಾಗಲಿದ್ದು, ಆ ಬಳಿಕ ಲೀನಾ, ಚಾನೆಲ್ ಸಂಸ್ಥೆಯ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಜಮ್’​ಶೆಡ್​’ಪುರ ಮೂಲದ ಲೀನಾ ನಾಯರ್ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಕಳೆದ 30 ವರ್ಷಗಳಿಂದ ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆಯಲ್ಲಿರುವ ಲೀನಾ, ಮ್ಯಾನೇಜ್’ಮೆಂಟ್ ಟ್ರೈನಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

https://twitter.com/LeenaNairHR/status/1470772517317103631

ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಸಮೂಹದಲ್ಲಿ ಒಂದಾಗಿರುವ ‘ಚಾನೆಲ್’​ ಫ್ರಾನ್ಸ್​ನ ಪ್ರತಿಷ್ಠಿತ ಫ್ಯಾಷನ್ ಸಂಸ್ಥೆಯಾಗಿದೆ. ಫ್ರೆಂಚ್ ಬಿಲಿಯನೇರ್ ಆಗಿರುವ 73 ವರ್ಷದ ಅಲೈನ್ ವರ್ತೈಮರ್ ತಮ್ಮ ಸಹೋದರ ಗೆರಾರ್ಡ್ ವರ್ತೈಮರ್ ಜೊತೆಗೂಡಿ ಚಾನೆಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. 52 ವರ್ಷ ವಯಸ್ಸಿನ ಅಮೆರಿಕದ ಉದ್ಯಮಿ ಮೌರೀನ್ ಚಿಕ್ವೆಟ್ 9 ವರ್ಷಗಳ ಕಾಲ ‘ಚಾನೆಲ್‌’ನ CEO ಆಗಿದ್ದರು. ಮೌರಿನ್ ಸ್ಥಾನ ತುಂಬಲಿರುವ ಲೀನಾ ನಾಯರ್, ಈ ಹಿಂದೆ ಬ್ರಿಟಿಷ್ ಸರ್ಕಾರದ ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ವಿಭಾಗದ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Join Whatsapp
Exit mobile version