Home ಕ್ರೀಡೆ ವಿರಾಟ್ ಕೊಹ್ಲಿ vs BCCI: ನಾಯಕತ್ವ ವಿಚಾರದಲ್ಲಿ ತದ್ವಿರುದ್ಧ ಪ್ರತಿಕ್ರಿಯೆ !

ವಿರಾಟ್ ಕೊಹ್ಲಿ vs BCCI: ನಾಯಕತ್ವ ವಿಚಾರದಲ್ಲಿ ತದ್ವಿರುದ್ಧ ಪ್ರತಿಕ್ರಿಯೆ !

ನವದೆಹಲಿ: ಟೀಮ್ ಇಂಡಿಯಾದ ಏಕದಿನ ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿಯನ್ನು ಬದಲಾಯಿಸಿದ ಬಳಿಕ ಕೊಹ್ಲಿ ಹಾಗೂ BCCI  ನಡುವಿನ ಶೀತಲ ಸಮರ ಮತ್ತಷ್ಟು ಜೋರಾಗಿದೆ.  ನಾಯಕ ಸ್ಥಾನದ ಕುರಿತ BCCI ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಗಳಿಗೆ ಪ್ರತಿಯಾಗಿ ವಿರಾಟ್ ಕೊಟ್ಟಿರುವ ಸ್ಪಷ್ಟೀಕರಣ ಮತ್ತಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ಕೊಹ್ಲಿ, BCCI ಹೇಳಿಕೆಗಳಿಗೆ ತದ್ವಿರುದ್ಧ ಪ್ರತಿಕ್ರಿಯೆ ಕೊಟ್ಟಿದ್ದಾರೆ. T-20 ನಾಯಕತ್ವ ಸ್ಥಾನದಿಂದ ಕೆಳಗಿಳಿಯುವಂತೆ ವಿರಾಟ್ ಕೊಹ್ಲಿ ಮನವೊಲಿಸಲಾಗಿತ್ತು ಎಂಬ ಸೌರವ್ ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೊಹ್ಲಿ, T-20 ನಾಯಕತ್ವ ಸ್ಥಾನ ತ್ಯಜಿಸುವುದು ನನ್ನದೇ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.

ಏಕದಿನ ತಂಡದ ನಾಯಕನಾಗಿ ಮುಂದುವರಿಯುವುದಾಗಿ BCCIಗೆ ನೇರವಾಗಿ ತಿಳಿಸಿದ್ದೆ. ಆದರೆ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಚರ್ಚೆಯ ಬಳಿಕ ಕೊನೆಯಲ್ಲಿ ನಾನು ಏಕದಿನ ತಂಡದ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿಬಿಟ್ಟರು. ಇದಕ್ಕೂ ಮೊದಲು ಆಯ್ಕೆ ಸಮಿತಿ ನಾಯಕತ್ವ ಸ್ಥಾನದಿಂದ ಕೈಬಿಡುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಮತ್ತೊಂದೆಡೆ ಏಕದಿನ ತಂಡದ ನಾಯಕತ್ವ ಸ್ಥಾನ ತ್ಯಜಿಸುವ ಬಗ್ಗೆ ನಿರ್ಧಾರ ಕೈಗೊಳ್ಲುವ ಬಗ್ಗೆ ಕೊಹ್ಲಿ ಜೊತೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಎಂದು ಈ ಹಿಂದೆ BCCI ಹೇಳಿತ್ತು. ಆದರೆ BCCI ವಾದವನ್ನು ಕೊಹ್ಲಿ ತಳ್ಳಿಹಾಕಿದ್ದಾರೆ.

Join Whatsapp
Exit mobile version