ಮಾಜಿ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು. 1918 ರಲ್ಲಿ ಕನಕಪುರದ ಹಾರೋಹಳ್ಳಿಯಲ್ಲಿ ದೊರೆಸ್ವಾಮಿ ಜನಿಸಿದ್ದರು.
ಇಂದು ಮದ್ಯಾಹ್ನ 1:30 ರ ಸಮಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿಯಿಂದ ಸ್ವಲ್ಪ ಆರೋಗ್ಯ ಹದಗೆಟ್ಟು ಇಂದು ಬೆಳಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು. ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಹೋದರೂ ಅಲ್ಲಿ ಅವರು ಮರಣ ಹೊಂದಿದರು ಎನ್ನಲಾಗಿದೆ
ದೊರೆಸ್ವಾಮಿಯವರು ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಭಾಗವಹಿಸಿದ್ದರು. ಮಾತ್ರವಲ್ಲ ಹಲವು ಭೂಕಬಳಿಕೆ ವಿರುದ್ಧವೂ ದೊರೆಸ್ವಾಮಿಯವರು ಹೋರಾಟ ಕೈಗೊಂಡಿದ್ದರು. ಪುಸ್ತಕ ಪ್ರಕಾಶನ ಮತ್ತು ಪತ್ರಿಕೋದ್ಯಮದಲ್ಲಿ ದೊರೆಸ್ವಾಮಿಯವರು ತಮ್ಮದೇ ಆದಂತಹಾ ಛಾಪು ಮೂಡಿಸಿದ್ದರು
ಇತ್ತೀಚೆಗಷ್ಟೇ ಕೋವಿಡ್ ರೋಗದಿಂದ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದರು. ಜಯದೇವ ಆಸ್ಪತ್ರೆಯಲ್ಲಿ ಅವರು ಕೋವಿಡ್ ಚಿಕಿತ್ಸೆ ಪಡೆದಿದ್ದರು