Home ಟಾಪ್ ಸುದ್ದಿಗಳು ಬಾಬಾ ರಾಮ್‌ ದೇವ್‌ ವಿವಾದಾತ್ಮಕ ಹೇಳಿಕೆ | 1,000 ಕೋಟಿ ರೂ. ಮಾನನಷ್ಟ ನೋಟಿಸ್‌ ಜಾರಿಗೊಳಿಸಿದ...

ಬಾಬಾ ರಾಮ್‌ ದೇವ್‌ ವಿವಾದಾತ್ಮಕ ಹೇಳಿಕೆ | 1,000 ಕೋಟಿ ರೂ. ಮಾನನಷ್ಟ ನೋಟಿಸ್‌ ಜಾರಿಗೊಳಿಸಿದ ಉತ್ತರಾಖಂಡ ಐಎಂಎ

ನವದೆಹಲಿ : ಕೊರೊನ ಪ್ರಕರಣಗಳ ಚಿಕಿತ್ಸೆಯ ವಿಷಯದಲ್ಲಿ ಅಲೋಪಥಿ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್‌ ದೇವ್‌ ವಿರುದ್ಧ ಉತ್ತರಾಖಂಡ ಐಏಂಎ 1,000 ಕೋಟಿ ರೂ. ಮೊತ್ತದ ಮಾನ ನಷ್ಟ ದಾವೆಯ ನೋಟಿಸ್‌ ಜಾರಿಗೊಳಿಸಿದೆ.

೧೫ ದಿನಗಳೊಳಗಾಗಿ ಅಲೋಪಥಿ ವೈದ್ಯಕೀಯ ವ್ಯವಸ್ಥೆಯ ಕುರಿತ ತನ್ನ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆ ನೀಡದಿದ್ದಲ್ಲಿ ಅಥವಾ ಲಿಖಿತ ಕ್ಷಮಾಪಣೆ ಕೇಳದಿದ್ದಲ್ಲಿ ರಾಮ್‌ ದೇವ್‌ ಅವರಿಂದ 1,000 ಕೋಟಿ ಕೇಳಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಉತ್ತರಾಖಂಡ ಘಟಕ ಹೇಳಿದೆ.

ಉತ್ತರಾಂಚಲ ಐಎಂಎ ಘಟಕವೂ ಉತ್ತರಾಖಂಡ ಮುಖ್ಯಮಂತ್ರಿಗೆ ಪತ್ರ ಬರೆದು, ವಿಷಯಕ್ಕೆ ಸಂಬಂಧಿಸಿ ರಾಮ್‌ ದೇವ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ. ಅಲೋಪಥಿ ವೈದ್ಯಶಾಸ್ತ್ರವು ಅವಿವೇಕತನದ್ದು ಎಂದು ಬಾಬಾ ರಾಮ್‌ ದೇವ್‌ ಹೇಳಿದ್ದರೆನ್ನಲಾದ ವೀಡಿಯೊವೊಂದು ವೈರಲ್‌ ಆಗಿದ್ದ ಹಿನ್ನೆಲೆಯಲ್ಲಿ, ಅವರ ಹೇಳಿಕೆಗೆ ಐಎಂಎ ಆಕ್ಷೇಪ ವ್ಯಕ್ತಪಡಿಸಿತ್ತು.

Join Whatsapp
Exit mobile version