Home ಅಪರಾಧ ಆ್ಯಪ್ ಮೂಲಕ ಮಹಿಳೆಗೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿ 10.76 ಲಕ್ಷ ರೂ ವಂಚನೆ

ಆ್ಯಪ್ ಮೂಲಕ ಮಹಿಳೆಗೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿ 10.76 ಲಕ್ಷ ರೂ ವಂಚನೆ

ಬೆಂಗಳೂರು: ಮಹಿಳೆಯೊಬ್ಬರಿಗೆ ಆ್ಯಪ್‌  ಮೂಲಕ ವಿದ್ಯುತ್‌ ಬಿಲ್‌ ಪಾವತಿಸುವಂತೆ ಸೂಚಿಸಿ ಬರೋಬ್ಬರಿ  10.76 ಲಕ್ಷ ರೂ ಸೈಬರ್‌ ಕಳ್ಳರು ವಂಚಿಸಿದ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

 ಡಾ.ವಾಣಿ ಪ್ರಭಾಕರ್‌ ಹಣ ಕಳೆದುಕೊಂಡ ಮಹಿಳೆಯಾಗಿದ್ದು, ಜು.7ರಂದು ಅವರ ಮೊಬೈಲ್‌ಗೆ ವಿದ್ಯುತ್‌ ಬಿಲ್‌ ಪಾವತಿಸುವಂತೆ ಅಪರಿಚಿತ ನಂಬರ್‌ನಿಂದ ಸಂದೇಶ ಬಂದಿತ್ತು ಎನ್ನಲಾಗಿದೆ.

ಸಂದೇಶ ಬಂದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ, ಆರೋಪಿಗಳು ಟೀಮ್‌ ವಿವರ್‌ ಆ್ಯಪ್‌ ಡೌನ್‌ ಲೋಡ್‌ ಮಾಡುವಂತೆ ಸೂಚಿಸಿದ್ದರು. ಅದರಂತೆ ವಾಣಿ ಆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಆ್ಯಪ್‌ ಮೂಲಕ 100 ರೂ. ಪಾವತಿಸಿದ್ದರು. ಕೆಲ ಹೊತ್ತಿನಲ್ಲಿ ವಾಣಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 10.76 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ.

ವಾಣಿ ಈ ಬಗ್ಗೆ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಸೈಬರ್‌ ಕಳ್ಳರ ಆಟ ಬೆಳಕಿಗೆ ಬಂದಿದೆ. ಡಾ.ವಾಣಿ ಪ್ರಭಾಕರ್‌ ಸೈಬರ್‌ ಕಳ್ಳರ ವಿರುದ್ಧ ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ

Join Whatsapp
Exit mobile version