ಮಂಗಳೂರು | ಚಿಟ್ ಫಂಡ್ ಹಣ ಮರಳಿಸದೆ ಮೋಸ: ವೃದ್ಧ ಆತ್ಮಹತ್ಯೆ

Prasthutha|

ಉಳ್ಳಾಲ: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರಿಗೆ ಇಬ್ಬರು ಚಿಟ್ ಫಂಡ್ ಹಣ ಮರಳಿಸದೆ ವಂಚನೆ ಮಾಡಿದ್ದರಿಂದ ಬೇಸತ್ತು ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡೂರು ಶಾಲೆ ಬಳಿ ನಡೆದಿದೆ.

- Advertisement -

ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆಯ ಬಳಿಯ ನಿವಾಸಿ ಜಯರಾಮ ಶೆಟ್ಟಿ(71) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಅವರ ಮೃತದೇಹ ಇಂದು ಬೆಳಗ್ಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿ ಲೀನಾ ಜೆ. ಶೆಟ್ಟಿ ಬೆಳಗ್ಗೆ ಚಹಾ ಕೊಡಲೆಂದು ಹೋಗುವಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಯರಾಮ್ ಶೆಟ್ಟಿ ಅವರು ಮಾಡೂರು ಬಸ್ಸು ತಂಗುದಾಣದ ಬಳಿಯ ಪಂಚಾಯತ್ ಕಟ್ಟಡದ ಅಂಗಡಿಯಲ್ಲಿ ಸೀಯಾಳ ವ್ಯಾಪಾರಿಯಾಗಿದ್ದು , ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರು. ಇಬ್ಬರು ಹಣ ಮರಳಿಸದೆ ಮೋಸ ಮಾಡಿದ್ದರಿಂದ, ಜಯರಾಮ್ ಶೆಟ್ಟಿ ತೀರ ನಷ್ಟ ಅನುಭವಿಸಿದ್ದು, ಇದೇ ಚಿಂತೆಯಲ್ಲೇ ಅವರು ನೇಣು ಬಿಗಿದು ಆತ್ಮ ಹತ್ಯೆಗೈದಿರುವುದಾಗಿ ಅವರ ಪತ್ನಿ ಕೋಟೆಕಾರ್ ಗ್ರಾಪಂ ಮಾಜಿ ಸದಸ್ಯೆ ಲೀನಾ ಪೊಲೀಸರಿಗೆ ದೂರು ನೀಡಿದ್ದಾರೆ.

Join Whatsapp
Exit mobile version