ಧುಪದಾಳ ಸಮೀಪ ಘಟಪ್ರಭಾ ಜಲಾಶಯದಲ್ಲಿ ನಾಲ್ವರು ಯುವಕರು ನೀರು ಪಾಲು

Prasthutha|

ಗೋಕಾಕ: ಪ್ರವಾಸಕ್ಕೆಂದು ಬಂದಿದ್ದ ಶಿರಸಿ ಸಮೀಪದ ಮುಂಡಗೋಡ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

- Advertisement -

ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌

ಉತ್ತರ‌ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಿರಿಗೆರೆ ಗ್ರಾಮದ ಸಂತೋಷ‌ ಈಡಿಗ(19), ಅಜಯ ಬಾಬು ಜೋಕಿ(19), ಕೃಷ್ಣಾ ಜೋಕಿ(20), ಆನಂದ ವಿಷ್ಣು ಕೋಕರೆ20) ಮೃತಪಟ್ಟಿದ್ದಾರೆ. ರಾಮಚಂದ್ರ ಕೋಕರೆ20) ಗಂಭೀರ ಸ್ಥಿತಿಯಲ್ಲಿ ಇದ್ದಾನೆ. ವಿಠ್ಠಲ ಕೋಕರೆ (20) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Join Whatsapp
Exit mobile version