ಕೆರೆಯಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳು ನೀರುಪಾಲು

Prasthutha|

ಹರಪನಹಳ್ಳಿ: ಕೆರೆಯಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ನಡೆದಿದೆ.

- Advertisement -


ನಂದಿಬೇವೂರು ತಾಂಡದ ಅಶ್ವಿನಿ ( 17), ಅವರ ಸಹೋದರ ಅಭಿಷೇಕ (14) , ಚೆನ್ನಹಳ್ಳಿ ತಾಂಡದ ಕಾವ್ಯ (19) ಮತ್ತು ತುಂಬಿನಕೇರಿ ತಾಂಡದ ಅಪೂರ್ವ(14) ಮೃತರು.
ಸಂಬಂಧಿಕರ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ತುಂಬಿದ ಕೆರೆ ನೋಡಲು ಹೋಗಿದ್ದಾಗ ಅಭಿಷೇಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆತನ ರಕ್ಷಣೆಗಿಳಿದು ಉಳಿದವರು ನೀರು ಪಾಲಾಗಿದ್ದಾರೆ.


ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಉಳಿದವರ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.



Join Whatsapp
Exit mobile version