Home ಟಾಪ್ ಸುದ್ದಿಗಳು ಐವರ ಪೈಕಿ ನಾಲ್ವರು AIMIM ಶಾಸಕರು ಆರ್ ಜೆ ಡಿಗೆ : ಬಿಹಾರದಲ್ಲಿ ಉವೈಸಿಗೆ...

ಐವರ ಪೈಕಿ ನಾಲ್ವರು AIMIM ಶಾಸಕರು ಆರ್ ಜೆ ಡಿಗೆ : ಬಿಹಾರದಲ್ಲಿ ಉವೈಸಿಗೆ ದೊಡ್ಡ ಹೊಡೆತ

ಪಾಟ್ನಾ: ಬಿಹಾರದಲ್ಲಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಜಯಿಸಿದ್ದ ಐವರು ಎಂ ಐ ಎಂ ಶಾಸಕರ ಪೈಕಿ ನಾಲ್ವರು ಶಾಸಕರು ತೇಜಸ್ವಿ ಯಾದವ್ ಅವರ ಆರ್ ಜೆ ಡಿಗೆ ಸೇರ್ಪಡೆಯಾಗಿದ್ದಾರೆಂದು ವರದಿಗಳು ತಿಳಿಸಿದೆ.

ಶಾನವಾಝ್, ಮುಹಮ್ಮದ್ ಅನ್ಸಾರ್ ನಯೀಮಿ, ಮುಹಮ್ಮದ್ ಇಝಾರ್ ಆಸಿಫಿ ಮತ್ತು ಸಯ್ಯದ್ ರುಕುನುದ್ದೀನ್  ಆರ್ ಜೆ ಡಿಗೆ ಸೇರ್ಪಡೆಯಾಗಲಿರುವ ಎಂ ಐ ಎಂ ಶಾಸಕರು.

  ಬಿಹಾರ ವಿರೋಧ ಪಕ್ಷದ ನಾಯಕರಾಗಿರುವ ತೇಜಸ್ವಿ ಯಾದವ್ ಇಂದು ತನ್ನ ಸ್ವಂತ ಕಾರಿನಲ್ಲಿ ಈ ನಾಲ್ವರು ಶಾಸಕರೊಂದಿಗೆ ವಿಧಾನಸಭೆಗೆ ಹಾಜರಾಗಿದ್ದರು. ಆಗಲೇ ಈ ಶಾಸಕರ ಆರ್ ಜೆ ಡಿ ಸೇರ್ಪಡೆ ಕುರಿತು ಸಂಶಯ ಮೂಡಿತ್ತು.

ಇದರೊಂದಿಗೆ ಬಿಹಾರ ವಿಧಾನಸಭೆಯಲ್ಲಿ ಆರ್ ಜೆಡಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಪ್ರಸ್ತುತ ಆರ್ ಜೆಡಿಯಲ್ಲಿ 76 ಶಾಸಕರು ಇದ್ದರು. ಬಿಜೆಪಿಯ 77 ಶಾಸಕರು ಇದ್ದಾರೆ.

Join Whatsapp
Exit mobile version