Home ಟಾಪ್ ಸುದ್ದಿಗಳು ಪಂಜಾಬ್ ನಲ್ಲಿ 2 ಗುಂಪುಗಳ ನಡುವೆ ಗುಂಡಿನ ದಾಳಿ: ನಾಲ್ವರ ಸಾವು

ಪಂಜಾಬ್ ನಲ್ಲಿ 2 ಗುಂಪುಗಳ ನಡುವೆ ಗುಂಡಿನ ದಾಳಿ: ನಾಲ್ವರ ಸಾವು

ಚಂಡೀಗಢ: ಪಂಜಾಬ್ ನ ಗುರುದಾಸಪುರ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ಪರಸ್ವರ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.


ಭಾನುವಾರ ರಾತ್ರಿ ಬಟಾಲಾದ ವಿತ್ವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರಡು ಗುಂಪುಗಳಲ್ಲಿ ಒಟ್ಟು 13 ಜನರಿದ್ದರು. ಹಳೆ ವೈಷಮ್ಯ ಘಟನೆಗೆ ಕಾರಣ ಎನ್ನಲಾಗಿದೆ.


ಗುಂಡಿನ ದಾಳಿಯಲ್ಲಿ ಪ್ರತಿ ಗುಂಪಿನಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version