ಚಂಡೀಗಢ: ಹಣ ಸುಲಿಗೆ ಮಾಡಲು ಐಟಿ ಸಂಸ್ಥೆಯ ಮೇಲೆ ನಕಲಿ ದಾಳಿ ನಡೆಸಿದ ಆರೋಪದ ಮೇಲೆ ನಾಲ್ವರು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ವರು ಆರೋಪಿತ ಅಧಿಕಾರಿಗಳು ಮೇ 11 ರಂದು ಚಂಡೀಗಢಕ್ಕೆ ತೆರಳಿದ್ದು ಅಲ್ಲಿ ಅವರನ್ನು ನಿಯೋಜಿಸದಿದ್ದರೂ ಸಹ ಶೋಧ ನಡೆಸಲು ಮುಂದಾಗಿದ್ದರು ಮತ್ತು ಕಾರ್ಯಾಚರಣೆಗೆ ಯಾವುದೇ ಪ್ರಕರಣ ಅಥವಾ ಆದೇಶವನ್ನು ಹೊಂದಿರಲಿಲ್ಲ. ಅಧಿಕಾರಿಗಳ ನಡವಳಿಕೆಯಲ್ಲಿ ಸಂಸ್ಥೆಯ ಉದ್ಯೋಗಿಗಳಿಗೆ ಅನುಮಾನ ಬಂದಿದ್ದು ಅವರನ್ನು ಸುತ್ತುವರಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ನೀತಿಯ ಬಗ್ಗೆ ಏಜೆನ್ಸಿಯ ಶೂನ್ಯ ಸಹಿಷ್ಣುತೆ ನೀತಿಯ ಭಾಗವಾಗಿ, ಆರೋಪಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.