Home ಕರಾವಳಿ ಮಂಗಳೂರು | ಸಾರ್ವಜನಿಕ ನೆಮ್ಮದಿಗೆ ಭಂಗ: ನಾಲ್ವರ ಬಂಧನ

ಮಂಗಳೂರು | ಸಾರ್ವಜನಿಕ ನೆಮ್ಮದಿಗೆ ಭಂಗ: ನಾಲ್ವರ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಎಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.


ಬಸವರಾಜ್ ಮಡಿವಾಳ್, ಈರಣ್ಣ ನೈನಾಪುರ, ರಾಮಪ್ಪ ತಂಬೂರಿ, ಪರಶುರಾಮ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.


ಈ ನಾಲ್ವರು ಸಾರ್ವಜನಿಕ ಸ್ಥಳದಲ್ಲಿ ಕೂಲಿಗೆ ಹೋಗುವ ವಿಚಾರದಲ್ಲಿ ರವಿವಾರ ಬೆಳಗ್ಗೆ ಬೈದಾಡಿ, ಹಲ್ಲೆ ನಡೆಸಿ ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದಿದ್ದಾರೆ ಎಂದು ಉರ್ವ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version