Home ಟಾಪ್ ಸುದ್ದಿಗಳು ಈದ್ ಮಿಲಾದ್ ಜಾಥಾದಲ್ಲಿ ತಲವಾರು ಪ್ರದರ್ಶಿಸಿದ ಆರೋಪ: 19 ಮಂದಿಯ ಬಂಧನ

ಈದ್ ಮಿಲಾದ್ ಜಾಥಾದಲ್ಲಿ ತಲವಾರು ಪ್ರದರ್ಶಿಸಿದ ಆರೋಪ: 19 ಮಂದಿಯ ಬಂಧನ

ಬೆಂಗಳೂರು: ಈದ್ ಮಿಲಾದ್ ಸಂದರ್ಭದಲ್ಲಿ ತಲವಾರು ಪ್ರದರ್ಶಿಸಿದ ಆರೋಪದಲ್ಲಿ ಸಿದ್ದಾಪುರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ಒಟ್ಟು 19 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಪೈಕಿ ಕೆಲವರು ಅಪ್ರಾಪ್ತ ಬಾಲಕರಾಗಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಭಾನುವಾರ ಪ್ರವಾದಿ ಜನ್ಮದಿನ ಪ್ರಯುಕ್ತ ಸಿದ್ದಾಪುರದಲ್ಲಿ ಈದ್ ಮಿಲಾದ್ ಜಾಥಾ ನಡೆಸಲಾಗಿತ್ತು. ಈ ವೇಲೆ ಕೆಲವರು ಕೈಯಲ್ಲಿ ತಲವಾರು ಹಿಡಿದಿದ್ದರು ಎನ್ನಲಾಗಿದೆ. ಈ ಸಂಬಂಧ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋ ಆಧಾರದಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿಕೊಂಡಿದ್ದರು.

ಕಳೆದ ರಾತ್ರಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Join Whatsapp
Exit mobile version