Home ಟಾಪ್ ಸುದ್ದಿಗಳು ಹೊಸ ಪಕ್ಷದ ಹೆಸರು ಪ್ರಕಟಿಸಿದ ಅಮರೀಂದರ್ ಸಿಂಗ್

ಹೊಸ ಪಕ್ಷದ ಹೆಸರು ಪ್ರಕಟಿಸಿದ ಅಮರೀಂದರ್ ಸಿಂಗ್

ಸೋನಿಯಾಗೆ ರಾಜೀನಾಮೆ ಪತ್ರ ರವಾನೆ
ಚಂಡೀಗಢ(ಪಂಜಾಬ್): ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಹೊಸ ಪಕ್ಷಕ್ಕೆ ‘ಪಂಜಾಬ್ ಲೋಕ್ ಕಾಂಗ್ರೆಸ್’ ಎಂದು ಹೆಸರಿಟ್ಟಿದ್ದಾರೆ.
ಪಕ್ಷದ ನೋಂದಣಿ ಬಾಕಿ ಇದ್ದು, ಚುನಾವಣಾ ಆಯೋಗ ಅನುಮೋದನೆ ನೀಡಬೇಕಿದೆ. ಪಕ್ಷದ ಚಿಹ್ನೆಯನ್ನು ಕೆಲವೇ ದಿನಗಳಲ್ಲಿ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಏಳು ಪುಟಗಳ ರಾಜೀನಾಮೆ ಪತ್ರ ಬರೆದು ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ, ಕಾರಣಗಳನ್ನೂ ಪತ್ರದಲ್ಲಿ ವಿವರಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ತಮ್ಮ ರಾಜೀನಾಮೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅಮರೀಂದರ್ ಸಿಂಗ್, ಮುಂದೊಂದು ದಿನ ಕಾಂಗ್ರೆಸ್ ಹೈಕಮಾಂಡ್ ತನ್ನ ನಿರ್ಧಾರಕ್ಕೆ ವಿಷಾದಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Join Whatsapp
Exit mobile version