Home ಟಾಪ್ ಸುದ್ದಿಗಳು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಪತ್ನಿಯ ಫೇಸ್‌ ಬುಕ್‌ ಪೇಜ್ ಹ್ಯಾಕ್‌

ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಪತ್ನಿಯ ಫೇಸ್‌ ಬುಕ್‌ ಪೇಜ್ ಹ್ಯಾಕ್‌

ವಿಜಯಪುರ: ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಪತ್ನಿಯ ಫೇಸ್‌ ಬುಕ್‌ ಪೇಜ್ ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು, ಇಲ್ಲಸಲ್ಲದ ಫೋಟೋ ಮತ್ತು ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಎಂ.ಬಿ. ಪಾಟೀಲ್ ಅವರ ಪತ್ನಿ ಆಶಾರಾಣಿ ಪಾಟೀಲರ ಫೇಸ್‌ ಬುಕ್‌ ಪೇಜ್ ಹ್ಯಾಕ್ ಆಗಿದ್ದು, ಲಾಗಿನ್ ಪಾಸವರ್ಡ್ ಬದಲಿಸಿದರೂ ಕೂಡ ಬೇಡವಾದ ಪೋಸ್ಟ್​ ಗಳನ್ನು ಮಾಡಲಾಗುತ್ತಿದೆ.

ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ ಎನ್‌ ಪಿಯ ಫೇಸ್‌ ಬುಕ್‌ ಅಕೌಂಟ್‌ ಗೆ ಆಶಾ ಪಾಟೀಲ ಪೇಜ್ ಆ್ಯಡ್ ಮಾಡಲಾಗಿತ್ತು. ಹ್ಯಾಕರ್ ​ಗಳು ಬಾಕ್ಸಿಂಗ್ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇದರಿಂದ ಬೇಸತ್ತು ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version