ಮಡ್ಗಾಂವ್: ಗೋವಾದ ಮಾಜಿ ಮುಖ್ಯಮಂತ್ರಿ, ಶಾಸಕ ಲೂಝಿನ್ಹೋ ಫಲೇರೋ ಅವರು ಇಂದು ತಮ್ಮ ಶಾಸಕತ್ವ ರಾಜೀನಾಮೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಟಿ.ಎಂ.ಸಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ನೀಡಿರುವ ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು “ ಜನರು ನನ್ನ ಮೇಲೆ ನಂಬಿಕೆ ಇರಿಸಿದಕ್ಕಾಗಿ ಅಭಾರಿಯಾಗಿದ್ದೇನೆ. ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ನಿರಂತರವಾಗಿ ಬೆಂಬಲವನ್ನು ಸೂಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯುವ ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ನಡೆಸುವುದಾಗಿ ಟಿ.ಎಂ.ಸಿ ಈಗಾಗಲೇ ಘೋಷಿಸಿದೆ.
ಈ ಮಧ್ಯೆ ಮಮತಾ ಬ್ಯಾನರ್ಜಿ ಇಂದು ಸುದ್ದಿಗೋಷ್ಠಿಯೊಂದನ್ನು ಆಯೋಜಿಸಿದ್ದು, ಅಧಿಕೃತವಾಗಿ ಆವರ ಸಮ್ಮುಖದಲ್ಲಿ ಲೂಝಿನ್ಹೋ ಫೆಲೇರೋ ಅವರು ಟಿ.ಎಂ.ಸಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಈ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಲು ಫೆಲೇರೋ ನಿರಾಕರಿಸಿದ್ದಾರೆ.