Home ಟಾಪ್ ಸುದ್ದಿಗಳು ಮಾಜಿ ಕ್ರಿಕೆಟಿಗ ದಿನೇಶ್ ಮೋಂಗಿಯಾ, ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ಮಾಜಿ ಕ್ರಿಕೆಟಿಗ ದಿನೇಶ್ ಮೋಂಗಿಯಾ, ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ದಿನೇಶ್‌ ಮೋಂಗಿಯಾ ಮತ್ತು ಪಂಜಾಬ್ ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮತ್ತು ಪಂಜಾಬ್‌ ಚುನಾವಣೆ ಮೇಲುಸ್ತುವಾರಿ ಗಜೇಂದ್ರ ಸಿಂಗ್‌ ಶೇಖಾವತ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‌ ಗೌತಮ್‌ ಮತ್ತು ರಾಜ್ಯಸಭಾ ಸದಸ್ಯ ಅನಿಲ್‌ ಬಲುನಿ ಸಮ್ಮುಖದಲ್ಲಿ ದಿನೇಶ್ ಮೋಂಗಿಯಾ ಜೊತೆ ಕಾಂಗ್ರೆಸ್‌ ನ ಶ್ರೀ ಹರಗೋವಿಂದಪುರ ಕ್ಷೇತ್ರದ ಶಾಸಕರಾದ ಬಲವಿಂದರ್‌ ಸಿಂಗ್‌ ಲಾಡಿ, ಕ್ವಾದಿಯಾನ್‌ ಕ್ಷೇತ್ರದ ಶಾಸಕ ಫತೆಹ್‌ಜಂಗ್‌ ಸಿಂಗ್‌ ವಾಜವಾ ಹಾಗೂ 13 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.


ಬಿಜೆಪಿ ಸೇರ್ಪಡೆಗೊಂಡ ಇತರ 13 ಮಂದಿ ಪೈಕಿ ಮಾಜಿ ಸಂಸದ ರಾಜದೇವ್‌ ಖಲ್ಸಾ, 3 ಬಾರಿ ಶಾಸಕರಾಗಿದ್ದ ಶಿರೋಮಣಿ ಅಕಾಲಿದಳದ ಮುಖಂಡ ಗುರ್ತೆ ಸಿಂಗ್‌ ಗುಧಿಯಾನಾ, ಯುನೈಟೆಡ್‌ ಕ್ರಿಶ್ಚಿಯನ್‌ ಫ್ರಂಟ್‌ ಪಂಜಾಬ್‍‌ ನ ಅಧ್ಯಕ್ಷ ಕಮಲ್‌ ಭಕ್ಷಿ, ವಕೀಲ ಮಧುಮೀತ್‌ ಪ್ರಮುಖರು.

Join Whatsapp
Exit mobile version