ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇರಳ ಮಾಜಿ ಸಿಎಂ ಎ.ಕೆ. ಆಂಟನಿ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪುತ್ರ ಅನಿಲ್ ಚುನಾವಣೆಯಲ್ಲಿ ಸೋಲಬೇಕು ಎಂದು ಶಾಪ ಹಾಕಿದ್ದಾರೆ.
ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಕೆ.ಆಂಟನಿ,ತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ತಮ್ಮ ಪುತ್ರ ಅನಿಲ್ ಆಂಟನಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ಪ್ರಚಾರಕ್ಕೆ ತೆರಳಲು ಸಾಧ್ಯವಾಗದಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್‌ನ ಪ್ರಮುಖ ನಾಯಕರ ಮಕ್ಕಳು ಬಿಜೆಪಿ ಸೇರುವುದು ತಪ್ಪು. ಮಕ್ಕಳ ಬಗ್ಗೆ ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ಕೆಎಸ್‌ಯು ಕಾಲದಿಂದಲೂ ಕುಟುಂಬ, ರಾಜಕೀಯ ಎರಡೂ ಬೇರೆ ಬೇರೆ ಎಂಬುದು ನನ್ನ ನಿಲುವು. ಕಾಂಗ್ರೆಸ್ ನನ್ನ ಧರ್ಮ. ಕೇರಳದಲ್ಲಿ ಬಿಜೆಪಿಯ ಸುವರ್ಣ ವರ್ಷಗಳು ಮುಗಿದಿವೆ. 2019 ರ ಸಂಸತ್ ಚುನಾವಣೆಯಲ್ಲಿ ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರವಾಗಿ ಬಿಜೆಪಿಗೆ ಸುವರ್ಣ ವರ್ಷವಾಗಿತ್ತು. 2024 ರ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ” ಎಂದರು.