Home ಟಾಪ್ ಸುದ್ದಿಗಳು ಹುಲಿ ಉಗುರು ಪ್ರಕರಣ | ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಜ್ಞಾನೇಂದ್ರ

ಹುಲಿ ಉಗುರು ಪ್ರಕರಣ | ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಜ್ಞಾನೇಂದ್ರ

ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ವ್ಯಕ್ತಿಗಳ ಬಂಧನ ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಏಕಾಏಕಿ ದಾಳಿ ನಡೆಸಿ ಬಂಧನ ಮಾಡುವುದು ಸರಿಯಾದ ಕ್ರಮ ಅಲ್ಲ. ನೂರಾರು ವರ್ಷಗಳಿಂದ ಇಂತಹ ವಸ್ತುಗಳ ಸಂಗ್ರಹ ಇದೆ. ಹಾಗೆ ಸಂಗ್ರಹಿಸಿಟ್ಟವರನ್ನೆಲ್ಲ ಬಂಧಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆ ಬರುವ ಮೊದಲು ಹುಲಿ ಉಗುರು, ವನ್ಯ ಪ್ರಾಣಿಗಳ ವಸ್ತುಗಳು ಮಲೆನಾಡು, ಕರಾವಳಿ ಭಾಗದಲ್ಲಿ ಅಲಂಕಾರಿಕ ವಸ್ತುವಾಗಿತ್ತು. ಮಕ್ಕಳಿಗೆ ಹುಲಿ ಉಗುರು ತೊಡಿಸುತ್ತಿದ್ದರು. ಏಕಾಏಕಿ ವ್ಯಕ್ತಿಗಳನ್ನು ಬಂಧನ ಮಾಡಿದರೆ ಜೈಲುಗಳಲ್ಲಿ ಸ್ಥಳ ಸಾಕಾಗುವುದಿಲ್ಲ ಎಂದು ಹೇಳಿದರು.

ವನ್ಯಜೀವಿ ರಕ್ಷಣಾ ಕಾಯ್ದೆಗೆ ನಾನು ವಿರೋಧಿ ಅಲ್ಲ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಉಗುರು ಇಟ್ಟಿರುವವರನ್ನೆಲ್ಲ ಬಂಧಿಸುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕು ಎಂದು ಜ್ಞಾನೇಂದ್ರ ಆಗ್ರಹಿಸಿದರು.

Join Whatsapp
Exit mobile version