ಯಾವುದೇ ಎಮಿರೇಟ್ ಪ್ರಾಯೋಜಕರಿಲ್ಲದೆ ಇನ್ನುಮುಂದೆ ವಿದೇಶಿ ಹೂಡಿಕೆದಾರರು ಸಂಪೂರ್ಣ ಮಾಲೀಕತ್ವದೊಂದಿಗೆ ಕಂಪೆನಿಗಳನ್ನು ನಡೆಸಬಹುದಾಗಿದೆ. ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ರ ಆದೇಶದೊಂದಿಗೆ ಇದು ಜಾರಿಗೆಬಂದಿದೆ.
ಸ್ಥಳೀಯ ಪ್ರಾಯೋಜಿಕರಿಲ್ಲದೆ ಯುಎಇಯಲ್ಲಿ ಕಂಪೆನಿಗಳು ತಮ್ಮ ಶಾಖೆಗಳನ್ನೂ ತೆರೆಯಬಹುದಾಗಿದೆ ಎಂದು ಆದೇಶವು ತಿಳಿಸಿದೆ.
ಈ ಕ್ರಮಗಳಿಂದಾಗಿ ವೆಚ್ಚ ಕಡಿಮೆಯಾಗಲಿದ್ದು, ದೇಶದಲ್ಲಿ ವ್ಯಾಪಾರ ಸುಲಭಗೊಳ್ಳಲಿದೆ. ಇದರೊಂದಿಗೆ ಎಮಿರೇಟ್ ಪ್ರಜೆ ಕಂಪೆನಿಯ ಚೆಯರ್ ಪರ್ಸನ್ ಆಗಬೇಕೆಂಬ ಕಡ್ಡಾಯ ನಿಯಮ ಜಾರಿಯಲ್ಲಿರುವುದಿಲ್ಲ. ಆದರೆ ತೈಲ ಮತ್ತು ಅನಿಲ, ಉಪಯುಕ್ತ ಹಾಗೂ ಸಾರಿಗೆ ಮತ್ತು ತಂತ್ರಕುಶಲತೆಯ ವಲಯಗಳು ಇದರಿಂದ ಹೊರತಾಗಿವೆ. 2015ರ ವಾಣಿಜ್ಯ ಕಂಪೆನಿಗಳ ಕಾನೂನು ಇದರ ಸಂ.2ರ ಅಡಿಯಲ್ಲಿ ವಿದೇಶಿ ಶೇರುದಾರರು ಕಂಪೆನಿಯೊಂದರಲ್ಲಿ ಗರಿಷ್ಠ 49 ಶೇಕಡಾ ಶೇರು ಹೊಂದಬಹುದಾಗಿತ್ತು. ಎಮಿರೇಟಿ ವ್ಯಕ್ತಿಗಳು ಅಥವಾ ಕಂಪೆನಿ ಉಳಿದ 51 ಶೇಕಡ ಶೇರು ಹೊಂದಿರಬೇಕಿತ್ತು. ಆದರೆ 2018ರ ವಿದೇಶಿ ನೇರ ಹೂಡಿಕೆ ಕಾನೂನಿನ ಆದೇಶ ಸಂಖ್ಯೆ 19, ವಿದೇಶಿ ಮಾಲೀಕರ ಮೇಲಿನ ನಿಬಂಧನೆಗಳನ್ನು ಸರಳಗೊಳಿಸುವ ಯೋಜನೆಯನ್ನು ಹಾಕಿತ್ತು