Home ಟಾಪ್ ಸುದ್ದಿಗಳು ಖಾಲಿ ಹಾಳೆಗಳಿಗೆ ಸಹಿ ಮಾಡಲು ಒತ್ತಾಯ: ಸಂಸತ್ ದಾಳಿ ಆರೋಪಿಗಳ ಹೇಳಿಕೆ

ಖಾಲಿ ಹಾಳೆಗಳಿಗೆ ಸಹಿ ಮಾಡಲು ಒತ್ತಾಯ: ಸಂಸತ್ ದಾಳಿ ಆರೋಪಿಗಳ ಹೇಳಿಕೆ

ನವದೆಹಲಿ: ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪದಲ್ಲಿ ವಿರೋಧ ಪಕ್ಷಗಳೊಂದಿಗೆ ಸೇರಿರುವುದಾಗಿ ಒಪ್ಪೊಕೊಂಡು ಖಾಲಿ ಹಾಳೆಗಳ ಮೇಲೆ ಸಹಿ ಮಾಡುವಂತೆ ದೆಹಲಿ ಪೋಲೀಸರು ಒತ್ತಾಯಿಸಿದ್ದಾರೆಂದು ಸಂಸತ್ ದಾಳಿ ಸಂಬಂಧ ಬಂಧನಕ್ಕೊಳಗಾದ ಐವರು ಹೇಳಿಕೆ ನೀಡಿದ್ದಾರೆ. ಅವರು ಹೆಚ್ಚುವರಿ ಸೆಷನ್ ಕೋರ್ಟ್‌ನ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ಈ ಹೇಳಿಕೆ ನೀಡಿದ್ದಾರೆ.

70 ಪುಟಗಳ ಖಾಲಿ ಹಾಳೆಗಳ ಮೇಲೆ ಸಹಿ ಮಾಡುವಂತೆ ಒತ್ತಡ ಹೇರಲಾಗಿದೆ. ವಿಚಾರಣೆಯ ವೇಳೆ ವಿದ್ಯುತ್ ಶಾಕ್ ನಂತಹ ಹಿಂಸೆ ನೀಡಿದ್ದಾರೆ ಎಂದು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಜಾ, ಅಮೋಲ್ ಶಿಂಧೆ ಮತ್ತು ಮಹೇಶ್ ಕುಮಾವತ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಹಾಗು ಅವುಗಳ ಮುಖಂಡರೊಡನೆ ಒಡನಾಟ ಹೊಂದಿರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ನ್ಯಾಯಾಲಕ್ಕೆ ಸಲ್ಲಿಸಲಾದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿಚಾರಣೆಯ ವೇಳೆ ಮೊಬೈಲ್, ಸಿಮ್, ಬೆರಳಚ್ಚು, ಸಾಮಾಜಿಕ ಜಾಲತಾಣಗಳ ಹಾಗು ಇಮೇಲ್‌ ಪಾಸ್‌ವರ್ಡ್ ಇತ್ಯಾದಿಗಳನ್ನು ಬಲವಂತದಿಂದ ಪಡೆಯಲಾಗಿದೆ ಎಂದೂ ಆರೋಪಿಸಲಾಗಿದೆ.

Join Whatsapp
Exit mobile version