Home ಕರಾವಳಿ ಫರಂಗಿಪೇಟೆ ಮರ್ಕಝ್ ಅಲ್ ಹುದಾ ಮದರಸ: ಪ್ರತಿಭೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ

ಫರಂಗಿಪೇಟೆ ಮರ್ಕಝ್ ಅಲ್ ಹುದಾ ಮದರಸ: ಪ್ರತಿಭೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ

ಫರಂಗಿಪೇಟೆ: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು (SKSM) ಇದರ ಫರಂಗಿಪೇಟೆ ಘಟಕದ ಅಧೀನದಲ್ಲಿ ಮರ್ಕಝ್-ಅಲ್-ಹುದಾ ಮದರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ಸಲಫಿ ಮೈದಾನ ಫರಂಗಿಪೇಟೆಯಲ್ಲಿ ನಡೆಯಿತು

ಕಾರ್ಯಕ್ರಮವನ್ನು SKSM ಕೇಂದ್ರ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಉದ್ಘಾಟಿಸಿದರು. ಸಲಫಿ ಎಜುಕೇಷನ್ ಬೋರ್ಡ್(SEB)ನ ಅಧ್ಯಕ್ಷ ಹನೀಫ್ ಬೋಳಂತೂರು ಮದರಸ ವಿದ್ಯಾಭ್ಯಾಸ ಮತ್ತು ಮಕ್ಕಳ ಬಾಧ್ಯತೆ ಎಂಬ ವಿಷಯದಲ್ಲಿ ಹಿತವಚನ ನೀಡಿದರು.

SKSM ನ ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಆಸ್ಕೋ, ದಾರುಲ್ ಖೈರ್ ಎಜುಕೇಶನಲ್ ಅಕಾಡಮಿಯ ಸಹ ಸಂಚಾಲಕ ಅಶ್ರಫ್ ಮಾಸ್, ಘಟಕದ ಅಧ್ಯಕ್ಷ ಸೈಯ್ಯದ್ ಬಾವ, ಉಪಾಧ್ಯಕ್ಷ ರಶೀದ್ ಕರ್ಮಾರ್, ಮದರಸ ಅಧ್ಯಕ್ಷ ಶಬೀರ್ ಕಾಸಿಂ, SEB ಯ ಕಾರ್ಯದರ್ಶಿ ಅಬೂ-ಬಿಲಾಲ್, S.M. ಸಿರಾಜ್ ಮಾಸ್ಟರ್, ಮಸೀದಿ ಇಮಾಮ್ ಹಾಫೀಝ್ ಇಮ್ತಿಯಾಝ್, ಮದರಸದ ಅಧ್ಯಾಪಕ ಉಸ್ತಾದ್ ಸರ್ಧಾಲ್ ಉಪಸ್ಥಿತರಿದ್ದರು.
ಅಸರ್ ನಮಾಝ್ ನ ನಂತರ ಬಹುಮಾನ ವಿತರಿಸಲಾಯಿತು. ಮಗ್ರಿಬ್ ನಮಾಝ್ ನ ನಂತರ ಶಿಹಾಬ್ ತಲಪಾಡಿಯವರು ಭಾಷಣ ಮಾಡಿದರು.

ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಫರಂಗಿಪೇಟೆ ಸೆಂಟರ್ ನಲ್ಲಿ ನಡೆದ ‘ಲರ್ನ್ ದಿ ಕುರ್’ಆನ್’ನ 11ನೇ ಮತ್ತು 12ನೇ ಹಂತದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಉಸ್ತಾದ್ ಮುಸ್ತಫಾ ದಾರಿಮಿ ‘ದಾರಿ ತಪ್ಪುತ್ತಿರುವ ನಮ್ಮ ಮಕ್ಕಳು’ ಎಂಬ ವಿಷಯದಲ್ಲಿಯೂ, ಮೌಲವಿ ಅಹ್ಮದ್ ಅನಸ್ ‘ಅಂಧಕಾರದಿಂದ ಪ್ರಕಾಶದೆಡೆಗೆ’ ಎಂಬ ವಿಷಯದಲ್ಲಿಯೂ ಪ್ರವಚನ ನೀಡಿದರು. SKSM ಹಿರಿಯ ನೇತಾರ UN ಅಬ್ದುಲ್ ರಝಾಕ್, ಬಶೀರ್ ಶಾಲಿಮಾರ್, ಹಸನ್ ಸಚ್ಚರಿಪೇಟೆ, ಅಹ್ಮದ್ ಮಾಸ್ಟರ್, ಬಾಷಾ ಕಂಕನಾಡಿ, ಜಬ್ಬಾರ್ ಮಾರಿಪಳ್ಳ, ರಹೀಮ್ ಬಿ.ಸಿರೋಡ್(ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ), ಹನೀಫ್ ಪಾಡಿ, ಲತೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು

Join Whatsapp
Exit mobile version