Home ಕರಾವಳಿ ಬೆಳ್ತಂಗಡಿ: ಅಕ್ರಮ ಪ್ರವೇಶಗೈದು ಮನೆ ಮಂದಿಗೆ ಜೀವ ಬೆದರಿಕೆ, ಐದು ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ...

ಬೆಳ್ತಂಗಡಿ: ಅಕ್ರಮ ಪ್ರವೇಶಗೈದು ಮನೆ ಮಂದಿಗೆ ಜೀವ ಬೆದರಿಕೆ, ಐದು ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ FIR ದಾಖಲು

►ಮತಾಂತರ ಆರೋಪ ಹೊರಿಸಿದ ಸಂಘಪರಿವಾರ

ಬೆಳ್ತಂಗಡಿ: ತಾಲೂಕಿನ ಕಾಣಿಯೂರು ಗ್ರಾಮದ ಪಿಲಿಗೂಡು ಕ್ವಾಟ್ರಸ್ ನಿವಾಸಿ ಮೈಮೂನ ಎಂಬವರ ಮನೆಯಲ್ಲಿ ಮತಾಂತರ ಆರೋಪ ಹೊರಿಸಿ ಸಂಘಪರಿವಾರದ  ಕಾರ್ಯಕರ್ತರು ಅಕ್ರಮವಾಗಿ ಒಳಪ್ರವೇಶಿಸಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.

ಮನೆಯವರಿಗೆ ಜೀವ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಪಣಿಕರ, ಯಶೋಧರ ನೆಕ್ಕಿಲ್, ಕಾರ್ತಿಕ್, ಹರೀಶ, ಬಾಬು, ದೇವರಾಜ್ ಕಣಿಯೂರು ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಮೈಮೂನ ಅವರ ಸಂಬಂಧಿಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕರೆದುಕೊಂಡು ಬಂದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಸಂಘಪರಿವಾರದ ಕಾರ್ಯಕರ್ತರು ಮಂಗಳವಾರ ರಾತ್ರಿ ಮೈಮೂನ ಅವರ ಮನೆಗೆ ದಾಳಿ ಮಾಡಿ, ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದರು. ಈ ವೇಳೆ ಪೊಲೀಸರು ಕೂಡ ಹಾಜರಿದ್ದರು ಎನ್ನಲಾಗಿದೆ.  ಬಳಿಕ ಆ ಯುವತಿಯನ್ನು ಉಪ್ಪಿನಂಗಡಿ ಪೊಲೀಸರು ಕಾರಿನಲ್ಲಿ ಠಾಣೆಗೆ ಕರೆತಂದು ಮನೆಮಂದಿಗೆ ಕರೆ ಮಾಡಿ ಅವರನ್ನು ಠಾಣೆಗೆ ಕರೆಸಿ ಮನೆಯವರೊಂದಿಗೆ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮೈಮೂನ ಅವರ ಮಗ ಸಂಶುದ್ದಿನ್ ಉಪ್ಪಿನಂಗಡಿ ಠಾಣೆಗೆ ಹೋಗಿ ಸಂಘಪರಿವಾರದ ಕಾರ್ಯಕರ್ತರು  ಮನೆಗೆ ಅಕ್ರಮ ಪ್ರವೇಶಗೈದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದು, ಅದರಂತೆ ಪೊಲೀಸರು  ಸಂಘಪರಿವಾರದ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Join Whatsapp
Exit mobile version