ಬೆಂಗಳೂರು: ಇಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ, ಚಂದರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭೂಮಿಯ ಕೆಲ ಭಾಗಗಳಲ್ಲಿ ಕತ್ತಲೆ ಆವರಿಸಲಿದೆ.
ಭಾಗಶಃ ಸೂರ್ಯಗ್ರಹಣ ಎಂದರೇನು?
ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಹಾದುಹೋದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಒಂದು ಭಾಗ ಮಾತ್ರ ಆವರಿಸುತ್ತದೆ. ಆಗ ಆಕಾಶದಲ್ಲಿ ಭಾಗಶಃ ಸೂರ್ಯನನ್ನು ಕಾಣಬಹುದಾಗಿದೆ. ಸೂರ್ಯನ ಉಳಿದ ಭಾಗ ಕತ್ತಲೆಯಿಂದ ಆವರಿಸಿರುತ್ತದೆ.
ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ?
ಇಂದು ಮಧ್ಯಾಹ್ನ 2.21ರಿಂದ ಸಂಜೆ 6.14ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈಶಾನ್ಯ ಅಮೆರಿಕ ಹಾಗೂ ಕೆನಡಾದ ಕೆಲ ಭಾಗಗಳಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ನ್ಯೂಯಾರ್ಕ್ ನಗರ, ಬೋಸ್ಟನ್, ಮಾಂಟ್ರಿಯಲ್ ಮತ್ತು ಕ್ವಿಬೆಕ್, ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಸಹ ಭಾಗಶಃ ಗ್ರಹಣ ಗೋಚರವಾಗಲಿದೆ.
ಎರಡು ಗಂಟೆಗಳ ಕಾಲ ಈ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಇಂದಿನ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.