Home ಟಾಪ್ ಸುದ್ದಿಗಳು ಭಾರತದ ಇತಿಹಾಸದಲ್ಲಿಯೇ ಮೊದಲು: ಯಾವುದೇ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆ

ಭಾರತದ ಇತಿಹಾಸದಲ್ಲಿಯೇ ಮೊದಲು: ಯಾವುದೇ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆ

ನವದೆಹಲಿ: ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ.

ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಹಲವು ರಾಜ್ಯಗಳು, ವರ್ಗಗಳು ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ,ದೇಶದ 200 ಮಿಲಿಯನ್ ಜನಸಂಖ್ಯೆಯಿರುವ ಮುಸ್ಲಿಂ ಸನುದಾಯದ ಒಂದೇ ಒಂದು ಸಚಿವ ಸ್ಥಾನ ನೀಡಲಾಗಿಲ್ಲ.

2022 ರಲ್ಲಿ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೂರು ವರ್ಷಗಳ ನಂತರ ರಾಜ್ಯಸಭೆಗೆ ಮರು ಆಯ್ಕೆಯಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇರಲಿಲ್ಲ.

ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರ ಸಂಪುಟದಲ್ಲಿ ಯಾವಾಗಲೂ ಕನಿಷ್ಠ ಒಬ್ಬ ಮುಸ್ಲಿಂ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ ಇದೇ ಮೊದಲು ಬಾರಿಗೆ ಕೇಂದ್ರದಲ್ಲಿ ಮುಸ್ಲಿಂ ಸಮುದಾಯ ಪ್ರಾತಿನಿಧ್ಯದಿಂದ ಸಂಪೂರ್ಣ ವಂಚಿತವಾಗಿದೆ.

ಲೋಕಸಭೆಗೆ ಈ ಬಾರಿ 24 ಮುಸ್ಲಿಂ ಸಂಸದರು ಆಯ್ಕೆ ಆಗಿದ್ದಾರೆ. 21 ಮಂದಿ ಸಂಸದರು ಇಂಡಿಯಾ ಮೈತ್ರಿಕೂಟದದಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ, ಐಎಂಐಎಂನಿಂದ ಅಸದುದ್ದೀನ್‌ ಉವೈಸಿ, ಜಮ್ಮು ಕಾಶ್ಮೀರದ ಸ್ವತಂತ್ರ ಅಭ್ಯರ್ಥಿಗಳಾಗಿ ಅಬ್ದುಲ್‌ ರಶೀದ್‌ ಶೇಖ್‌ ಹಾಗೂ ಮುಹಮ್ಮದ್‌ ಹನೀಫಾ ಆಯ್ಕೆಯಾಗಿದ್ದಾರೆ.

2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಆಗಿನ ರಾಜ್ಯಸಭಾ ಸಂಸದ ನಜ್ಮಾ ಹೆಪ್ತುಲ್ಲಾ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು.

1999 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇಬ್ಬರು ಮುಸ್ಲಿಮ ಸಚಿವರನ್ನು ಹೊಂದಿತ್ತು – ಶಾನವಾಜ್ ಹುಸೇನ್ ಮತ್ತು ಉಮರ್ ಅಬ್ದುಲ್ಲಾ. 1998 ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ನಖ್ವಿ ರಾಜ್ಯ ಸಚಿವರಾಗಿದ್ದರು.

Join Whatsapp
Exit mobile version