ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿ ಸುಟ್ಟು ಆಕ್ರೋಶ: ವೀಡಿಯೊ ವೈರಲ್, ಕ್ರಮಕ್ಕೆ ಒತ್ತಾಯ

Prasthutha|

ನವದೆಹಲಿ: ಅಯೋಧ್ಯೆಯಲ್ಲಿಯೇ ಭಾರತೀಯ ಜನತಾ ಪಕ್ಷ ಸೋಲು ಕಂಡದಕ್ಕಾಗಿ ಅಯೋಧ್ಯೆಯ ಜನರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅಯೋಧ್ಯೆಯ ಜನರನ್ನು ನಿಂದಿಸುತ್ತಿದ್ದಾರೆ. ಈ‌ ಮಧ್ಯೆ ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಯನ್ನು ಸುಡುತ್ತಾ ವ್ಯಕ್ತಿಯೊಬ್ಬ ಆಕ್ರೋಶ ಹೊರಹಾಕುವ ವೀಡಿಯೊ ವೈರಲ್ ಆಗುತ್ತಿದೆ.

- Advertisement -

ಬಿಜೆಪಿ ಶಾಲು ಧರಿಸಿದ ವ್ಯಕ್ತಿಯೊಬ್ಬ ಅಯೋಧ್ಯೆಯ ವಿರುದ್ಧ ತನ್ನ ಹತಾಶೆಯನ್ನು ಹೊರಹಾಕುತ್ತಿರುವುದನ್ನು ತೋರಿಸುವ ಮತ್ತೊಂದು ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಬಿಜೆಪಿ ಬೆಂಬಲಿಗನಂತೆ ಕಾಣುವ ವ್ಯಕ್ತಿಯೊಬ್ಬ ತನ್ನ ಕುತ್ತಿಗೆಗೆ ಬಿಜೆಪಿ ಸ್ಕಾರ್ಫ್ ಧರಿಸಿ, ರಸ್ತೆಯ ಮೇಲೆ ಅಯೋಧ್ಯೆಯ ಹೆಸರನ್ನು ಬರೆದು ಬೆಂಕಿ ಹಚ್ಚಿದ್ದಾನೆ. ಅದರಲ್ಲಿ “ಪ್ರಭು ಶ್ರೀ ರಾಮ್ ಕಾ ಲಾಜ್ ತೋ ರಾಖ್ ಲೆಟೆ” ಎಂದು ಬರೆಯಲಾಗಿದೆ. (ಕನಿಷ್ಠ ಶ್ರೀ ರಾಮನ ಗೌರವವನ್ನು ಎತ್ತಿಹಿಡಿಯಬಹುದಿತ್ತು)

ನೆಟ್ಟಿಗರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

Join Whatsapp
Exit mobile version