Home ಟಾಪ್ ಸುದ್ದಿಗಳು ರಸ್ತೆ ಅಪಘಾತ: ತಹಶೀಲ್ದಾರ್‌ ರಿಂದ ವೈದ್ಯೆಗೆ ಪ್ರಥಮ ಚಿಕಿತ್ಸೆ

ರಸ್ತೆ ಅಪಘಾತ: ತಹಶೀಲ್ದಾರ್‌ ರಿಂದ ವೈದ್ಯೆಗೆ ಪ್ರಥಮ ಚಿಕಿತ್ಸೆ

ಚಿಂಚೋಳಿ: ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವೈದ್ಯಾಧಿಕಾರಿ ಮತ್ತು ಅವರ ತಂದೆಗೆ ತಹಶೀಲ್ದಾರ್ ಒಬ್ಬರು ಪ್ರಥಮ ಚಿಕಿತ್ಸೆ ನೀಡಿ ನೆರವಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಳಿ ನಡೆದಿದೆ.

ಗಡಿಕೇಶ್ವಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಝೀಬಾ ಹಾಗೂ ಅವರ ತಂದೆ ಜಹೀರ್‌ ಅಹ್ಮದ್‌ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದನ್ನು ಗಮನಿಸಿದ ತಹಶೀಲ್ದಾರ್‌ ಅಂಜುಮ್‌ ತಬಸುಮ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಅಲ್ಲದೆ ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೋಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

ತಹಶೀಲ್ದಾರ್‌ ತಬಸುಮ್‌ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Join Whatsapp
Exit mobile version