Home ಟಾಪ್ ಸುದ್ದಿಗಳು ಭೀಕರ ಅಗ್ನಿದುರಂತ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

ಭೀಕರ ಅಗ್ನಿದುರಂತ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

ಮುಂಬೈ: ಧಾರಾವಾಹಿ ಸೆಟ್’ನಲ್ಲಿ ಅಗ್ನಿದುರಂತ ಸಂಭವಿಸಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮವಾದ ಘಟನೆ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆದಿದೆ.


ಹಿಂದಿಯ ‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಸೆಟ್ ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ.


ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version