ಮುಂಬೈ: ತಮ್ಮ ಟ್ವೀಟ್ ಮತ್ತು ಸಂದರ್ಶನಗಳ ಮೂಲಕ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸಿದ ಆರೋಪದಲ್ಲಿ ಕಂಗನಾ ರಾಣವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಮುಂಬೈಯ ಕೋರ್ಟೊಂದು ಶನಿವಾರ ಆದೇಶಿಸಿದೆ.
ದೈಹಿಕ ಮಾರ್ಗದರ್ಶಕ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಮುನ್ನಾರಲಿ ಸಯ್ಯದ್ ರ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ಜಯ್ಡೊ ಘುಲೆ ಆದೇಶವನ್ನು ಹೊರಡಿಸಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿರುವುದು, ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಕುರಿತ ರಾಣವತ್ ರ ಹೇಳಿಕೆಗಳನ್ನು ಸಯ್ಯದ್ ಉಲ್ಲೇಖಿಸಿದ್ದಾರೆ.
ಫಿಲ್ಮ್ ಇಂಡಸ್ಟ್ರಿಯನ್ನು ಸ್ವಜನ ಪಕ್ಷಪಾತ, ಕೋಮು ತಾರತಮ್ಯ, ಡ್ರಗ್ ಮೊದಲಾದುವುಗಳ ಮನೆ ಎಂಬುದಾಗಿ ರಾಣವತ್ ಬಣ್ಣಿಸಿರುವುದಾಗಿ ದೂರುದಾರ ಆರೋಪಿಸಿದ್ದಾರೆ. ಭಿನ್ನ ಧರ್ಮಗಳಿಗೆ ಸೇರಿದ ಕಲಾಕಾರರ ಮಧ್ಯೆ ಒಡಕುಂಟುಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಸಯ್ಯದ್ ಹೇಳಿದ್ದಾರೆ.