Home ಕರಾವಳಿ ಮಂಗಳೂರು: ಇಸ್ಲಾಂ ಧರ್ಮ ಅವಹೇಳನಗೈದಿದ್ದ ಹಿಂಜಾವೇ ಮುಖಂಡನ ವಿರುದ್ಧ FIR ದಾಖಲು

ಮಂಗಳೂರು: ಇಸ್ಲಾಂ ಧರ್ಮ ಅವಹೇಳನಗೈದಿದ್ದ ಹಿಂಜಾವೇ ಮುಖಂಡನ ವಿರುದ್ಧ FIR ದಾಖಲು

ಮಂಗಳೂರು: ವಿಟ್ಲದಲ್ಲಿ ಇತ್ತೀಚೆಗೆ ಆರೆಸ್ಸೆಸ್ ಸಹ ಸಂಘಟನೆಗಳಾದ ವಿ ಹೆಚ್ ಪಿ ಮತ್ತು ಬಜರಂಗದಳ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಇಸ್ಲಾಮ್ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ನಾಲಗೆ ಹರಿಯಬಿಟ್ಟಿದ್ದ ಮತಾಂಧ ರಾಧಾಕೃಷ್ಣ ಅಡ್ಯಂತಾಯನ  ವಿರುದ್ಧ ಮತ್ತು ಕಾರ್ಯಕ್ರಮ ಆಯೋಜಕರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 90/2022 ರಲ್ಲಿ ಐಪಿಸಿ ಸೆಕ್ಷನ್ 505(2) ಮತ್ತು ಸೆಕ್ಷನ್ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಚ್ಚರಿಯೆಂಬಂತೆ ಆರೋಪಿಯು ಬಹಿರಂಗವಾಗಿ ಒಂದು ಧರ್ಮವನ್ನು ಅವಹೇಳಿಸಿದ್ದರೂ ಪೊಲೀಸರು ಆತನ ಮೇಲೆ 153 A ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ.

ಆರೋಪಿಯು ಜೂನ್ 6 ರಂದು ವಿಟ್ಲ ಬಸ್ ನಿಲ್ದಾಣದ ಬಳಿ ಆರೆಸ್ಸೆಸ್ ಸಹಸಂಘಟನೆಗಳು  ಆಯೋಜಿಸಿದ್ದ ಸಭೆಯಲ್ಲಿ ತೀರಾ ಅವಹೇಳನಕಾರಿಯಾಗಿ ನಾಲಗೆ ಹರಿಯಬಿಟ್ಟಿದ್ದ. ಇದೇ ಆರೋಪಿ ಅಡ್ಯಂತಾಯ ಕಳೆದ ಬಾರಿ ಪೊಲೀಸ್ ಅಧಿಕಾರಿಯ ಕಾಲು ಕಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಬಾರಿಯೂ ಪೊಲೀಸರು ಆರೋಪಿಯ ಮೇಲೆ ಕಠಿಣ ಸೆಕ್ಷನ್ ಗಳನ್ನು ಹೇರದೆ ದಯೆ ತೋರಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 153A ಸೆಕ್ಷನ್ ಕೇವಲ ಮುಸಲ್ಮಾನರಿಗಾಗಿ ಮಾತ್ರ ಮೀಸಲೇ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version