Home ಟಾಪ್ ಸುದ್ದಿಗಳು ಪಠ್ಯ ವಾಪಸು ಪಡೆದ 61 ಸಾಹಿತಿಗಳಿಗೆ ಕೊಲೆ ಬೆದರಿಕೆ

ಪಠ್ಯ ವಾಪಸು ಪಡೆದ 61 ಸಾಹಿತಿಗಳಿಗೆ ಕೊಲೆ ಬೆದರಿಕೆ

►►ದೇವನೂರು, ಎಸ್ ಜಿ ಎಸ್, ತಾಳ್ಯ ಸೇರಿ ಹಲವರಿಗೆ ಅನಾಮಧೇಯ ಪತ್ರ


ಬೆಂಗಳೂರು: ಪಠ್ಯ ಪುಸ್ತಕದ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದ ಬೆನ್ನಲ್ಲೇ, ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ರೋಹಿತ್ ಚಕ್ರತೀರ್ಥ ಸಮಿತಿಯು ತಿರುಚಿದ ಪಠ್ಯವನ್ನು ತಿರಸ್ಕರಿಸಿ, ಒಂದೇ ವರ್ಗದ ಸಾಹಿತಿಗಳ ಪಠ್ಯ ಹಾಗೂ ಸುಳ್ಳು ಮಾಹಿತಿ ದಾಖಲಿಸಿವುದನ್ನು ವಿರೋಧಿಸಿ ರಾಜ್ಯಾದ್ಯಂತ ಸಾಹಿತಿಗಳು ಸರಣಿ ಸ್ವರೂಪದಲ್ಲಿ ಈ ಹಿಂದೆ ಪಠ್ಯದ ಬೋಧನೆಗೆ ನೀಡಿದ್ದ ಒಪ್ಪಿಗೆಯನ್ನು ವಾಪಸು ಪಡೆದಿರುವುದಾಗಿ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದರು.


ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಜಿ. ರಾಮಕೃಷ್ಣ, ಎಸ್ ಜಿ ಸಿದ್ದರಾಮಯ್ಯ, ಚಂದ್ರಶೇಖರ ತಾಳ್ಯ, ರೂಪಾ ಹಾಸನ, ಸರಜೂ ಕಾಟ್ಕರ್, ಬೋಳುವಾರು ಮುಹಮದ್, ಈರಪ್ಪ ಕಂಬಳಿ ಒಳಗೊಂಡಂತೆ 61 ಸಾಹಿತಿಗಳಿಗೆ ಬಂದಿರುವ ಅನಾಮಧೇಯ ಎರಡು ಪುಟದ ಪತ್ರದಲ್ಲಿ ‘ಹಿಂದೂಧರ್ಮ ಅವಹೇಳನ ಮಾಡಿ, ಕೇಸರೀಕರಣಗೊಳಿಸಿದ್ದೀರಿ ಎಂದು ಸುಳ್ಳು ಹೇಳುತ್ತಿದ್ದೀರಿ. ಜೊತೆಗೆ ನೀವೆಲ್ಲ ದೇಶಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನೀವೆಲ್ಲ ನಾಶವಾಗುತ್ತೀರಿ. ಕೊನೆಗೆ ದುರ್ಮರಣಕ್ಕೆ ತುತ್ತಾಗುತ್ತೀರಿ ಎಚ್ಚರಿಕೆ’ ಎಂದು ಬರೆದ ಈ ಅನಾಮಧೇಯ ಪತ್ರ ನಮ್ಮ ಪತ್ರಿಕೆಗೆ ಲಭ್ಯವಾಗಿದೆ.


ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಕೆಲವು ಸಾಹಿತಿಗಳು ಜೀವ ಬೆದರಿಕೆಯ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

Join Whatsapp
Exit mobile version