Home ಟಾಪ್ ಸುದ್ದಿಗಳು ಬಿಜೆಪಿ, ಆರ್​ಎಸ್​ಎಸ್​ ಬಗ್ಗೆ ಹೇಳಿಕೆ: ರಾಹುಲ್​ ಗಾಂಧಿ ವಿರುದ್ಧ FIR​ ದಾಖಲು

ಬಿಜೆಪಿ, ಆರ್​ಎಸ್​ಎಸ್​ ಬಗ್ಗೆ ಹೇಳಿಕೆ: ರಾಹುಲ್​ ಗಾಂಧಿ ವಿರುದ್ಧ FIR​ ದಾಖಲು

ಗುವಾಹಟಿ: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆ ಕಾಂಗ್ರೆಸ್​ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿರುದ್ಧ ​ಗುವಾಹಟಿಯ ಪಾನ್ ಬಜಾರ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಗುವಾಹಟಿ ಮೂಲದ ವಕೀಲ ಮೊಂಜಿತ್ ಚೇಟಿಯಾ ದೂರು ನೀಡಿದ್ದರು. ಆ ನಿಟ್ಟಿನಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕೃತ್ಯಗಳ ಆರೋಪದ ಮೇಲೆ ಸೆಕ್ಷನ್ 152 ಮತ್ತು 197 (1)ಡಿ ಅಡಿಯಲ್ಲಿ ಎಫ್​​ಐಆರ್​ ದಾಖಲಿಸಲಾಗಿದೆ.

ಬಿಜೆಪಿ ಮತ್ತು ಆರ್​​ಎಸ್​ಎಸ್​ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಕಾಂಗ್ರೆಸ್​ ಕಚೇರಿ ಉದ್ಘಾಟನೆ ವೇಳೆ ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ಈ ಹೇಳಿಕೆಯೂ ಅಪಾಯಕಾರಿ, ಅಶಾಂತಿಗೆ ಕಾರಣವಾಗಬಹುದು. ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸಬಹುದು. ಸಾರ್ವಜನಿಕರನ್ನು ದಂಗೆ ಪ್ರಚೋದಿಸಬಹುದು ಎಂದು ವಕೀಲ ಮೊಂಜಿತ್ ಚೇಟಿಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷ ಕಳೆದ ಹಿನ್ನೆಲೆ ಅಯೋಧ್ಯೆಯಲ್ಲಿ ಮಾತನಾಡಿದ್ದ ಆರ್​​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮ ಮಂದಿರ ಉದ್ಘಾಟನೆ ಬಳಿಕ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹೇಳಿಕೆಗೆ ಕೊಟ್ಟಿದ್ದರು. ಭಾಗವತ್ ಮಾತಿಗೆ ರಾಹುಲ್ ಗಾಂಧಿ ಕೆಂಡಾಮಂಡಲರಾಗಿದ್ದರು. ಪ್ರತಿಯೊಬ್ಬ ಭಾರತೀಯರಿಗೂ ಅವಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟ, ಸಂವಿಧಾನಕ್ಕೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದರು.

Join Whatsapp
Exit mobile version