Home ಟಾಪ್ ಸುದ್ದಿಗಳು ಫೆಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ FIR: ಪೊಲೀಸರ ನಡೆ ನಾಚಿಗೇಡು; ಅನ್ವರ್...

ಫೆಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ FIR: ಪೊಲೀಸರ ನಡೆ ನಾಚಿಗೇಡು; ಅನ್ವರ್ ಸಾದತ್

ಮಂಗಳೂರು: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ 11 ಮಂದಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಈ ಬಗ್ಗೆ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಟ್ವೀಟ್ ಮಾಡಿ, ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಪೊಲೀಸರ ನಡೆ ನಾಚಿಗೇಡು ಎಂದು ಹೇಳಿದ್ದಾರೆ.

ಫೆಲೆಸ್ತೀನ್ ನಾಗರಿಕರ ವಂಶಹತ್ಯೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ FIR ದಾಖಲಿಸಿದ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಪೋಲೀಸರ ನಡೆ ನಾಚಿಗೇಡು. ಹಾಗಾದರೆ ಪೋಲಿಸ್ ಹಾಗೂ ಸರ್ಕಾರ ವಂಶಹತ್ಯೆಯ ಪರ ಇರುವವರೆ?
ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಫೆಲೆಸ್ತೀನ್ ವಿಚಾರದಲ್ಲಿ ಶಾಂತಿಯ ಪ್ರತಿಪಾದನೆ ಮಾಡಿದೆಲ್ಲವೂ ಕಣ್ಣೊರೆಸುವ ತಂತ್ರವೇ? ರಾಜ್ಯದಲ್ಲಿ ಜಾತ್ಯಾತೀತ ಲೇಬಲ್ ನ ಸರ್ಕಾರ ಇದ್ದರೂ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡು ಸಾಧಿಸಲು ಹೊರಟದ್ದು ಏನನ್ನು ಸಿಎಂ ಸಿದ್ದರಾಮಯ್ಯನವರೆ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.

Join Whatsapp
Exit mobile version