ಪುತ್ತೂರು: ಕಡಬ ತಾಲೂಕಿನ ಬೇಳ್ಪಾಡಿಯಲ್ಲಿ 24/06/2022 ರಂದು ರಾತ್ರಿ ಮನೆಯೊಳಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಬಾಸ್ಕರ್, ಲಿಖಿತ್, ಜಯರಾಮ, ಉದಯ, ರಾಜೇಶ್ ಎಂಬವರು ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಲ್ಲದೆ ,ಮಕ್ಕಳ ಮೇಲೂ ದಾಳಿ ಮಾಡಿದ್ದಾರೆ. ಮತ್ತು ಮನೆಯ ಕಿಟಕಿ,ಬಾಗಿಲಿಗೆ ಹಾನಿ ಮಾಡಿದ್ದು ಈ ಐವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..