ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಚುನಾವಣಾ ಅಧಿಕಾರಿಗೆ ಥಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬೂತ್‌ನ ಹೊರಗೆ ಮತದಾರರ ಉದ್ದನೆಯ ಸರತಿ ಸಾಲಿನಿಂದಾಗಿ ಅಸಮಾಧಾನಗೊಂಡ ಶಾಸಕ ಸಂಗೀತ್ ಸೋಮ್ ನಿಧಾನಗತಿಯ ಮತದಾನದ ವಿರುದ್ಧ ಇಲ್ಲಿನ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಕಪಾಳಕ್ಕೆ ಹೊಡೆದರು ಎನ್ನಲಾಗಿದೆ. ಶಾಸಕರ ಬೆಂಬಲಿಗರು ಮತಗಟ್ಟೆಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೂ ಧ್ವಂಸ ಮಾಡಿದ್ದಾರೆ ಎಂದು ಸ್ಥಳಕ್ಕಾಗಮಿಸಿದ ಪೋಲೀಸರು ಹೇಳಿದ್ದಾರೆ.
ಸೋಮ್ ಸರ್ಧಾನದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರ ಮುಜಾಫರ್‌ನಗರ ಗಲಭೆ ಪ್ರಕರಣ ಮತ್ತುಇತ್ತೀಚಿನ ಎಫ್‌ಐಆರ್ ಸೇರಿ ಸೋಮ್ ವಿರುದ್ಧ ಈಗ ಎಂಟು ಪ್ರಕರಣಗಳಿವೆ. ಆದರೆ ಅವುಗಳಲ್ಲಿ ಯಾವುದರಲ್ಲೂ ಸೋಮ್ ಶಿಕ್ಷೆಗೊಳಗಾಗಿಲ್ಲಎಂದು ಮಾಧ್ಯಮಗಳು ವರದಿ ಮಾಡಿವೆ.