ಹೊಸದಿಲ್ಲಿ: ಹಿಜಾಬ್ ಧರಿಸಿರುವ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಈ ಬಗ್ಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಹಿಜಾಬ್ ಧರಿಸಿದ ಮಹಿಳೆಯರು ಕಾಲೇಜಿಗೆ ಹೋಗುತ್ತಾರೆ, ಜಿಲ್ಲಾಧಿಕಾರಿಗಳು, ಮ್ಯಾಜಿಸ್ಟ್ರೇಟ್ ಗಳು, ವೈದ್ಯರು, ಉದ್ಯಮಿಗಳಾಗುತ್ತಾರೆ. ಮುಂದೊಂದು ದಿನ ದೇಶದ ಪ್ರಧಾನ ಮಂತ್ರಿಯಾಗುತ್ತಾಳೆ ಎಂದು ಉವೈಸಿ ಹೇಳಿದ್ದಾರೆ.